ನವದೆಹಲಿ: ಮೂಡಾ ಭ್ರಷ್ಟಚಾರ ಆರೋಪದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ದೂರು ನೀಡಲಾಗಿದೆ. ದೆಹಲಿಯಲ್ಲಿ ಅಹಿಂದಾ ಚಳುವಳಿ ಸಂಘಟನೆಯ ರಾಜ್ಯ ಮುಖ್ಯ ಜಂಟಿ ಸಂಚಾಲಕ ಎನ್.ವೆಂಕಟೇಶಗೌಡ (Venkatesh Gowda), ಯುವ ಘಟಕದ ರಾಜ್ಯಧ್ಯಕ್ಷ ಬಿ.ಟಿ.ಮಂಜುನಾಥ್‌ರಿಂದ ದೂರು ನೀಡಲಾಗಿದೆ.
ಖಾಸಗಿ ದೂರಿನ ಮೇರೆಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ. ಬಿಜೆಪಿ-ಜೆಡಿಎಸ್ ಒತ್ತಡಕ್ಕೆ ಮಣಿದು ಅನುಮತಿ ನೀಡಿದೆ. ರಾಜ್ಯಪಾಲರ ಕಚೇರಿ ರಾಜಕೀಯವಾಗಿ ದುರ್ಬಳಕೆಯಾಗುತ್ತಿದ್ದು, ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?
ದೂರಿನ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಹಿಂದಾ ಚಳುವಳಿ ಸಂಘಟನೆಯ ರಾಜ್ಯ ಮುಖ್ಯ ಜಂಟಿ ಸಂಚಾಲಕ ಎನ್.ವೆಂಕಟೇಶಗೌಡ, ಸಿಎಂ ಸಿದ್ದರಾಮಯ್ಯ ದೇಶದಲ್ಲಿ ಮಾದರಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಓಬಿಸಿ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಎರಡನೇ ಅವಧಿಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ.
ಈ ಅಭಿವೃದ್ಧಿಯನ್ನು ಸಹಿಸದೇ ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನ ಕಸಿದುಕೊಳ್ಳುವ ಹುನ್ನಾರ ಮಾಡಿದ್ದು, ಈ ಮೂಲಕ ಬಡ ಸಮುದಾಯಗಳ ಶಕ್ತಿ ಕುಂದಿಸುವ ತಂತ್ರ ಮಾಡಿವೆ. ರಾಜಕೀಯ ಒತ್ತಡಕ್ಕೆ ಮಣಿದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ಕಾನೂನು ಬಾಹಿರ ನಡೆಯಾಗಿದ್ದು, ಕೂಡಲೇ ರಾಷ್ಟ್ರಪತಿಗಳು ರಾಜ್ಯಪಾಲರ ಕಚೇರಿ ದುರ್ಬಳಕೆ ತಡೆಯಬೇಕು ಮತ್ತು ರಾಜ್ಯಪಾಲರನ್ನು ವಾಪಸ್ ಕರೆಸುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: Kolkata Horror | 36 ಗಂಟೆಗಳ ಅಮಾನುಷ ಶಿಫ್ಟ್ ಸರಿಯಲ್ಲ ಎಂದ ಸುಪ್ರೀಂ – ಸುಳ್ಳುಪತ್ತೆ ಪರೀಕ್ಷೆಗೆ ಅಸ್ತು!