ಮಡಿಕೇರಿ: ಚುನಾವಣೆಗೆ ಸ್ಪರ್ಧಿಸಲು ವಯಸ್ಸಿನ ಸುಳ್ಳು ದಾಖಲೆ ನೀಡಿದ್ದರು ಎಂದು ಆರೋಪಿಸಿ ಶಾಸಕ ಹಾಗೂ ಮಾಜಿ ಸ್ಪೀಕರ್ (Former Speaker) ಕೆ.ಜಿ ಬೋಪಯ್ಯ (K.G Bopaiah) ವಿರುದ್ಧ ವ್ಯಕ್ತಿಯೊಬ್ಬರು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೋಪಯ್ಯ ತಮ್ಮ ವಯಸ್ಸನ್ನು ತಿದ್ದಿ, ತಪ್ಪು ಮಾಹಿತಿ ನೀಡಿ ನಾಮಪತ್ರ ಸಲ್ಲಿಸಿದ್ದರು ಎಂದು ಪಿ.ಬಿ ತಿಮ್ಮಯ್ಯ ಎಂಬವರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಆತಂಕ ಸೃಷ್ಟಿಸಿರುವ H3N2ಗೆ ರಾಜ್ಯದಲ್ಲಿ ಮೊದಲಿ ಬಲಿ
ದೂರಿನಲ್ಲಿ ವಿರಾಜಪೇಟೆ (Virajpet) ಕ್ಷೇತ್ರದ ವಿಧಾನಸಭಾ ಸದಸ್ಯರಾದ ಕೆ.ಜಿ ಬೋಪಯ್ಯ 1979ರ ಅಕ್ಟೋಬರ್‌ನಲ್ಲಿ ಬಾರ್ ಕೌನ್ಸಿಲ್ (Bar Council) ವಕೀಲರಾಗಿದ್ದರು. ಅವರು ಆಗ ತಮ್ಮ ಹುಟ್ಟಿದ ದಿನಾಂಕವನ್ನು 1951 ಅಕ್ಟೋಬರ್ 17 ಎಂದು ದಾಖಲಿಸಿದ್ದರು. ಆದರೆ ಬೋಪಯ್ಯನವರು 2004 ನೇ ಸಾಲಿನ ಚುನಾವಣೆ ಸಮಯದಲ್ಲಿ ಅವರ ವಯಸ್ಸು 53 ವರ್ಷ ಆಗಿತ್ತು. ಆದರೆ ಬೋಪಯ್ಯನವರು ತಮ್ಮ ವಯಸ್ಸನ್ನು 49 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದರು.
2013ರ ಚುನಾವಣೆಯಲ್ಲಿ ಅವರ ವಯಸ್ಸು 61 ವರ್ಷ ಆಗಿತ್ತು. ಆದರೆ ಅವರು ಚುನಾವಣಾ ಆಯೋಗಕ್ಕೆ (Election Commission) 58 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದರು. ಮತ್ತು 2018ರ ಚುನಾವಣೆಯಲ್ಲಿ ಅವರ ವಯಸ್ಸು 67 ಆಗಿತ್ತು. ಆದರೆ ತಮ್ಮ ವಯಸ್ಸನ್ನು 65 ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ದೂರುದಾರ ತಿಮ್ಮಯ್ಯ ಆರೋಪಿಸಿದ್ದಾರೆ.
ಇದು ಚುನಾವಣೆ ನೀತಿ ಸಂಹಿತೆ ಅನುಗುಣವಾಗಿ ಗಂಭೀರ ಅಪರಾಧವಾಗಿದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ದಾಖಲಿಸಿದ್ದಾರೆ.
ಬೋಪಯ್ಯ ಸ್ಪಷ್ಟನೆ: ಪ್ರತೀ ಚುನಾವಣೆ ಬಂದಾಗ ನನ್ನ ವಿರುದ್ಧ ಇಂತಹ ಆರೋಪ ಮಾಡುವ ಗ್ಯಾಂಗ್ ಮಡಿಕೇರಿಯಲ್ಲಿದೆ. ವಯಸ್ಸಿನ ಬಗ್ಗೆ ಸುಳ್ಳು ದಾಖಲೆ ನೀಡಿದ ಆರೋಪದ ದೂರು ದಾಖಲಾಗಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನನ್ನ ತಂದೆ ಹೆಬ್ಬೆಟ್ಟು. ನನ್ನ ತಂದೆ ಕೊಟ್ಟಿರುವ ದಿನಾಂಕವನ್ನೇ ನಾನು ಫಾಲೋ ಮಾಡುತ್ತಾ ಬಂದಿದ್ದೇನೆ ಎಂದು ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.
ನನ್ನ ವಿರುದ್ಧದ ಹಿಂದೆ ಸೋ ಕಾಲ್ಡ್ ಪರಿಸರವಾದಿಗಳು ಇದ್ದಾರೆ. ಅವರ ಈ ಸಣ್ಣತನಕ್ಕೆ ನಾನು ಸಣ್ಣತನ ಮಾಡಲ್ಲ. ನನ್ನ ಎಲ್ಲಾ ದಾಖಲೆಗಳಲ್ಲೂ ಒಂದೇ ಡೇಟ್ ಇದೆ. ಈ ಬಾರಿ ಚುನಾವಣೆ ಎದುರಿಸಲು ತನಗೆ ಪಕ್ಷದ ತೀರ್ಮಾನವಾಗಿದೆ. ಆರೋಪಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಎರಡು ಕ್ಷೇತ್ರದ ಬಿಜೆಪಿ ಸ್ಥಾನಗಳನ್ನು ಕುಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಚರ್ಚ್ ಮೇಲೆ ಗುಂಡಿನ ದಾಳಿ 7 ಮಂದಿ ಸಾವು- ಹಲವರಿಗೆ ಗಾಯ