ಬೆಂಗಳೂರು: ಸಂಸದ ಡಿಕೆ ಸುರೇಶ್ (DK Suresh) ಭಾರತ ವಿಭಜನೆ ಹೇಳಿಕೆ ಈಗ ಕೋರ್ಟ್ ಅಂಗಳ ತಲುಪಿದೆ. ಬಂಟ್ವಾಳ ಮೂಲದ ವಿಕಾಸ್ ಪಿ ಎಂಬುವವರು ಡಿಕೆಸು ವಿರುದ್ಧ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.
ಡಿ ಕೆ ಸುರೇಶ್ ಅವರ ಹೇಳಿಕೆ ದೇಶ ವಿರೋಧಿ ಮತ್ತು ಪ್ರಚೋದನಕಾರಿ ಹೇಳಿಕೆಯಾಗಿದೆ. ಐಪಿಸಿ ಸೆಕ್ಷನ್ 124(ಎ) ಪ್ರಕಾರ ಡಿಕೆಸು ಹೇಳಿಕೆ ಶಿಕ್ಷಾರ್ಹ ಅಪರಾಧ ಆಗಲಿದೆ. ದೇಶದ ನಾಗರೀಕರಿಗೆ ಡಿಕೆಸು ಹೇಳಿಕೆ ಮಾನಸಿಕ ಆಘಾತ ತಂದಿದೆ. ಹೀಗಾಗಿ ನ್ಯಾಯಾಲಯವು ಈ ಹೇಳಿಕೆ ಕುರಿತ ಮುಂದಿನ ತನಿಖೆಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ನಿರ್ದೇಶಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಹೈಕೋರ್ಟ್ ಮೆಟ್ಟಿಲೇರಿದ ನಿಖಿಲ್ ಕುಮಾರಸ್ವಾಮಿ
Advertisement
Advertisement
ಇನ್ನೊಂದು ಕಡೆ ಸಂಸದ ಡಿಕೆಸು ಹೇಳಿಕೆ ವಿರುದ್ಧ ಲೋಕಸಭೆ ಸ್ಪೀಕರ್ ಅವರಿಗೂ ದೂರು ಸಲ್ಲಿಸಲಾಗಿದೆ. ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ಅವರು ಲೋಕಸಭೆ ಸ್ಪೀಕರ್‌ಗೆ ಎರಡು ಪುಟಗಳ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ
Advertisement
ಸಂವಿಧಾನದ ಪ್ರಮಾಣ ವಚನ ಸ್ವೀಕಾರ ಮಾಡಿರುವ ಡಿಕೆಸು ತಮ್ಮ ಹೇಳಿಕೆ ಮೂಲಕ ಉಲ್ಲಂಘಿಸಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿರುವ ಡಿಕೆಸು ಸಂಸದ ಸ್ಥಾನದಲ್ಲಿ ಮುಂದುವರೆಯುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಡಿಕೆಸು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭೆ ಸ್ಪೀಕರ್‌ಗೆ ಛಲವಾದಿ ನಾರಾಯಣ ಸ್ವಾಮಿ ಪತ್ರ ಬರೆದಿದ್ದಾರೆ.
Advertisement