ಧಾರವಾಡ: ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಮತ್ತು ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ವಿರುದ್ಧ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದಾರೆ.
ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಧಾರವಾಡ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಶ್ರೀರಾಮುಲು ಶಿವಳ್ಳಿ ನಿಧನಕ್ಕೆ ಮೈತ್ರಿ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರಜಾಪ್ರತಿನಿಧಿ ಕಾಯ್ದೆಯ ಅಡಿ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
Advertisement
Advertisement
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಿಸಿ ದೀಪಾ ಚೋಳನ್ ಅವರಿಗೆ ಛಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಬಿಡ್ನಾಳ ಹೆಸರಿನಲ್ಲಿ ದೂರು ಸಲ್ಲಿಸಲಾಗಿದೆ. ದೂರು ನೀಡುವ ವೇಳೆ ಸಂಸದ ವಿ.ಎಸ್. ಉಗ್ರಪ್ಪ ಮತ್ತು ಇತರರು ಭಾಗಿಯಾಗಿದ್ದರು. ದೂರಿನ ಜೊತೆಗೆ ಕೈ ಮುಂಖಡರು ಶ್ರೀರಾಮುಲು ಹೇಳಿಕೆಯ ಪೆನ್‍ಡ್ರೈವ್ ಸಹ ನೀಡಿದ್ದಾರೆ.
Advertisement
ಶ್ರೀರಾಮುಲು ವಿರುದ್ಧ ಡಿಸಿಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಉಗ್ರಪ್ಪ, ಕಾಂಗ್ರೆಸ್ ನಿಯೋಗದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದೇವೆ. ದೂರಿನ ಜೊತೆಗೆ ಡಿಸಿಗೆ ರಾಮುಲು ಆಡಿದ ಮಾತಿನ ಪೆನ್‍ಡ್ರೈವ್ ಕೂಡ ಕೊಟ್ಟಿದ್ದೇವೆ. ರಾಮುಲು ಹೇಳಿಕೆಯಲ್ಲಿ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಎಂದಿರುವುದು ಸ್ಪಷ್ಟವಾಗಿದೆ. ಕಿರುಕುಳ ನೀಡಿ ಮೃತಪಟ್ಟಿರುವುದು ಗೊತ್ತಿದ್ದರೆ ಸುಮ್ಮನೆ ಯಾಕೆ ಇದ್ದರು. ಕೃತ್ಯದ ಮಾಹಿತಿ ಗೊತ್ತಿದ್ದು ಮುಚ್ಚಿಡುವ ಕಾರ್ಯ ಮಾಡಿದರೆ ಅದು ಕೂಡ ಒಂದು ಅಪರಾಧ. ಅದನ್ನು ಕೂಡ ನಾವು ದೂರಿನಲ್ಲಿ ಪ್ರಸ್ತಾಪ ಮಾಡಿದ್ದೇವೆ ಎಂದು ಹೇಳಿದ್ದಾರೆ.
Advertisement
ಶ್ರೀರಾಮುಲು, ಕುಂದಗೋಳ ಅಭ್ಯರ್ಥಿ ಚಿಕ್ಕನಗೌಡರ ಹಾಗೂ ಬಿಜೆಪಿ ಕೂಡ ಇದಕ್ಕೆ ಹೊಣೆಗಾರರಾಗಿದ್ದಾರೆ. ರಾಮುಲು ರಾಜಕೀಯ ಮತಕ್ಕಾಗಿ ಸಾವನ್ನು ಬಳಸಿಕೊಳ್ಳುವ ಸಣ್ಣತನ ತೋರಿದ್ದಾರೆ. ನಾನು ರಾಮುಲು ಕ್ಷಮೆಯಾಚಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ನನ್ನ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ರಾಮುಲು ನನ್ನ ಕ್ಷೇತ್ರದ ಮತದಾರ, ಹೀಗಾಗಿ ಅವರ ಹೇಳಿಕೆಗೆ ನಾನು ಕ್ಷಮೆ ಕೇಳುವೆ. ಚುನಾವಣಾ ಆಯೋಗ ಅವರ ಮೇಲೆ ಕೇಸ್ ದಾಖಲಿಸಬೇಕು. ಬಿಎಸ್‍ವೈ, ಅಮಿತ್ ಶಾ ತಮ್ಮ ನಾಯಕರ ಮಾತಿನ ಬಗ್ಗೆ ಅರಿತುಕೊಳ್ಳಬೇಕು ಈ ಹೇಳಿಕೆಗೆ ಪಕ್ಷವಾದರೂ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.