ಬಾಲಿವುಡ್ ನ ಹೆಸರಾಂತ ನಟ ರಣಬೀರ್ ಕಪೂರ್ (Ranbir Kapoor) ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಭಾವನೆಗಳಿಗೆ ರಣಬೀರ್ ಕಪೂರ್ ಧಕ್ಕೆ ತಂದಿದ್ದಾರೆ ಎನ್ನುವ ಕಾರಣವನ್ನಿಟ್ಟುಕೊಂಡು ಬಾಂಬೆ ಹೈಕೋರ್ಟ್ ವಕೀಲರಾದ ಪಂಕಜ್ ಮಿಶ್ರಾ ಹಾಗೂ ಆಶಿಷ್ ರಾಜ್ ದೂರು ನೀಡಿದ್ದಾರೆ.
ಕ್ರಿಸ್ ಮಸ್ (Christmas) ಹಬ್ಬದ ದಿನದಂದು ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಕೇಕ್ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ಆನಂತರ ಜೈ ಮಾತಾದಿ ಎಂದು ಘೋಷಣೆ ಕೂಗಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ವಿಡಿಯೋವನ್ನು ಗಮನಿಸಿ ರಣಬೀರ್ ಮತ್ತು ಕುಟುಂಬದ ವಿರುದ್ಧ ದೂರು ಸಲ್ಲಿಕೆಯಾಗಿದೆ.
ಅಗ್ನಿಯು ಹಿಂದುತ್ವದ ಸಂಕೇತ. ಕ್ರಿಸ್ ಮಸ್ ಆಚರಣೆಯ ಸಂದರ್ಭದಲ್ಲಿ ಇನ್ನೊಂದು ಧರ್ಮೀಯರ ಭಾವನೆ ಧಕ್ಕೆ ನೀಡಲಾಗಿದೆ. ಈ ಹಬ್ಬದಲ್ಲಿ ಆಲಿಯಾ ಭಟ್ (Alia Bhatt) ಸೇರಿದಂತೆ ಹಲವರು ಭಾಗಿಯಾಗಿದ್ದರು.