ಶ್ರೀನಗರ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತ್ತು. ಪಾಕ್ ಗೆಲುವನ್ನು ಶ್ರೀನಗರದ ಮೆಡಿಕಲ್ ವಿದ್ಯಾರ್ಥಿಗಳು ಸಂಭ್ರಮಿಸಿದ್ದರು. ವಿದ್ಯಾರ್ಥಿಗಳ ನಡೆಯನ್ನು ಪ್ರಶ್ನಿಸಿ ದೂರು ದಾಖಲಾಗಿತ್ತು. ಇದೀಗ ದೂರದಾರಿಗೆ ಉಗ್ರರು ಬೆದರಿಕೆ ಹಾಕಿ ಎಚ್ಚರಿಕೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಟೆರರ್ ಔಟ್‍ಫಿಟ್ ಯುನೈಟೆಡ್ ಲಿಬರೇಷನ್ ಫ್ರಂಟ್(ಯುಎಲ್‍ಎಫ್) ದೂರು ನೀಡಿದವರಿಗೆ ಎಚ್ಚರಿಕೆಯನ್ನು ನೀಡಿದೆ. ಯಾರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೋ, ಅವರು 48 ಗಂಟೆಯೊಳಗೆ ಕ್ಷಮೆ ಕೇಳಬೇಕು. ದೂರು ನೀಡಿದವರು ಯಾರು ಎಂದು ನಮಗೆ ಗೊತ್ತಿದೆ. ಸ್ಥಳೀಯರಲ್ಲದ ನೌಕರರು ಮತ್ತು ವಿದ್ಯಾರ್ಥಿಗಳು ಇಂಥ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ದಕ್ಷಿಣ ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಈ ತಿಂಗಳು ಕಾರ್ಮಿಕರ ಮೇಲೆ ದಾಳಿ ಆಗಿತ್ತು. ಈ ದಾಳಿಯನ್ನು ಮಾಡಿದ್ದು ನಾವೇ ಎಂದು ಯುಎಲ್‍ಎಫ್ ಉಗ್ರರು ಇದೇ ವೇಳೆ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಭಾರತದ ವಿರುದ್ಧ ಗೆದ್ದಾಗ ದೇಶದ ಹಲವು ಭಾಗಗಳಲ್ಲಿ ಸಂಭ್ರಮಿಸಿದ್ದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅಲ್ಲದೇ ಪಟಾಕಿಗಳನ್ನೂ ಕೂಡ ಹೊಡೆದು ಸಂಭ್ರಮಿಸಲಾಗಿತ್ತು. ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಹುದ್ದೆಗೆ ದ್ರಾವಿಡ್ ಅಧಿಕೃತ ಅರ್ಜಿ ಸಲ್ಲಿಕೆ
Advertisement
Advertisement
ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮೆಡಿಕಲ್ ಸ್ಟೂಡೆಂಟ್ ವಿರುದ್ಧ 2 ಕೇಸ್ ದಾಖಲಿಸಿಕೊಂಡು ಎಫ್‍ಐಆರ್ ದಾಖಲಿಸಿದ್ದಾರೆ. ಕಾನೂನು ಬಾಹೀರ ಚಟುವಟಿಕೆ(Prevention) ಆ್ಯಕ್ಟ್ ಅಡಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿತ್ತು. ಸಂಬಾ ಜಿಲ್ಲೆಯ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ