ಬೆಂಗಳೂರು: ನಾಡಪ್ರಭು ಕೆಂಪೇಗೌಡ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮೈಸೂರು ಹುಲಿ ಟಿಪ್ಪು ಸುಲ್ತಾನ ಜಯಂತಿಯನ್ನು ಬಿಬಿಎಂಪಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಈಗ ಪಾಲಿಕೆಯಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡಬೇಕೆಂಬ ಬೇಡಿಕೆ ಆರಂಭವಾಗಿದೆ.
ಹಾಲುಮತದ ಸಮುದಾಯದ ನಾಯಕರು ಪಾಲಿಕೆಯ ಗಾಜಿನ ಮನೆಯಲ್ಲಿ ಕನಕ ಜಯಂತಿ ಆಚರಣೆಗೆ ಅವಕಾಶ ನೀಡಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈಗಾಗಲೇ ಪಾಲಿಕೆ ಆಡಳಿತ ಪಕ್ಷದ ನಾಯಕ ಶಿವರಾಜ್ ಈ ಬಾರಿ ಕನಕದಾಸ ಜಯಂತಿ ಆಚರಿಸಲು ಅನುಮತಿ ನೀಡಬೇಕೆಂದು ಆಯುಕ್ತರಿಗೆ ಪತ್ರ ಬರೆದಿದ್ದಾರೆ.
Advertisement
ಹೀಗೆ ಪ್ರತಿಯೊಂದು ಜಯಂತಿಯನ್ನು ಆಚರಣೆ ಮಾಡಿದ್ರೆ ಸರ್ಕಾರದ ಬೊಕ್ಕಸವೇ ಒಂದು ದಿನ ಖಾಲಿ ಆಗುತ್ತದೆ. ಕನಕ ಜಯಂತಿ ಸಾಧಾರಣವಾಗಿ ನಡೆಸಿದರೂ ಕನಿಷ್ಟ 10 ರಿಂದ 25 ಲಕ್ಷ ಹಣ ಬೇಕು. ತೆರಿಗೆ ದಾರರ ಹಣವನ್ನು ಪೋಲು ಮಾಡಲು ಹೊಸ ಮಾರ್ಗವನ್ನು ಹುಡುಕಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇತ್ತ ಟಿಪ್ಪು ಜಯಂತಿಗಾಗಿ ಸದ್ಯ ಅಲ್ಪಸಂಖ್ಯಾತ ಸಮುದಾಯ ಕಾರ್ಪೋರೆಟರ್ ಗಳು ಪಟ್ಟು ಹಿಡಿದಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement