Sunday, 22nd July 2018

Recent News

ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ

ಬಾಗಲಕೋಟೆ: ಶಾಸಕ ಹೆಚ್ ವೈ ಮೇಟಿ ವಿರುದ್ಧ ವಿಜಯಲಕ್ಷ್ಮೀ ಸರೂರು ಚುನಾವಣಾ ಅಖಾಡಕ್ಕೆ ಸಿದ್ಧರಾಗಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್ ವೈ ಮೇಟಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ.

ಪಕ್ಷೇತರವಾಗಿ ಚುನಾವಣೆಗೆ ನಿಲ್ಲೋಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯೋದಿಲ್ಲ. ಯಾವುದೇ ಆಸೆ ಆಮಿಷಗಳಿಗೂ ಮಣಿಯೋದಿಲ್ಲ ಸ್ಪರ್ಧೆ ಖಚಿತ. ನಾನು ಸಾಕಷ್ಟು ನೊಂದಿದ್ದೇನೆ. ನನ್ನಂತೆ ನೊಂದ ಮಹಿಳೆಯರ ಪರ ಕೆಲಸ ಮಾಡುತ್ತೇನೆ. ಜನರಿಂದಲೇ ಸಹಾಯ ಕೇಳಿ ಕಾಲುಬಿದ್ದು ಮತ ಕೇಳುತ್ತೇನೆ ಎಂದು ವಿಜಯಲಕ್ಷ್ಮೀ ಸರೂರು ತಿಳಿಸಿದ್ದಾರೆ.

ಹೆಚ್ ವೈ ಮೇಟಿ ಮತ್ತು ವಿಜಯಲಕ್ಷ್ಮೀ ಸರೂರ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಮ್ಮ ಸಮುದಾಯದ ಜನತೆ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ಇನ್ನು ಮೇಟಿ ಅವರನ್ನು ಸೋಲಿಸಲು ಇತರೆ ಪ್ರಬಲ ಪಕ್ಷದವರು ವಿಜಯಲಕ್ಷ್ಮೀ ಸರೂರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ. ವಿಜಯಲಕ್ಷ್ಮೀ ಸರೂರಗೆ ಎಮ್ ಇ ಪಿ ಪಕ್ಷದಿಂದ ಆಫರ್ ಬಂದಿದೆಯಂತೆ. ಆದರೆ ನಾನು ಸದ್ಯಕ್ಕೆ ನಿರ್ಧಾರ ಕೈಗೊಂಡಿಲ್ಲ. ಪಕ್ಷೇತರ ಸ್ಪರ್ಧೆ ವಿಚಾರ ಮಾತ್ರ ಇದೆ. ಮೇಟಿಯವರನ್ನು ಸೋಲಿಸೋದೆ ನನ್ನ ಗುರಿ ಎಂದಿದ್ದಾರೆ.

Leave a Reply

Your email address will not be published. Required fields are marked *