ಮಂಡ್ಯ: ಮೈಸೂರಿನಿಂದ ಬೆಂಗಳೂರು ಕಡೆ ಹೊರಟಿದ್ದ ಚಾಮುಂಡಿ ಎಕ್ಸ್ ಪ್ರೆಸ್ ನ ಮುಂಬದಿಯಿಂದ ನಾಲ್ಕನೇ ಬೋಗಿ ನಂತರದ 17 ಬೋಗಿಗಳು ಪ್ರತ್ಯೇಕಗೊಂಡಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ರೈಲಿನ ಬೋಗಿಗಳು ಪ್ರತ್ಯೇಕಗೊಂಡಿದ್ದು, ಪ್ರಯಾಣಿಕರೆಲ್ಲಾ ಭಯಗೊಂಡಿದ್ದಾರೆ. ನಿಲ್ದಾಣ ಸಮೀಪದಲ್ಲಿ ಇದ್ದಿದರಿಂದ ಹಾಗೂ ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ಯಾವುದೇ ಅಪಾಯವಾಗಿಲ್ಲ.
ಬೋಗಿ ಬೇರ್ಪಟ್ಟಿದ್ದರಿಂದ ಚಲಿಸುತ್ತಿದ್ದ ರೈಲಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರೈಲು ಬೋಗಿ ಜೋಡಿಸುವ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ.
https://youtu.be/hqZuzxDZE-M