ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ (Petrol Diesel Price Hike) ಮಾಡಿ ವಾಹನ ಸವಾರರಿಗೆ ಶಾಕ್ ಕೊಟ್ಟಿದ್ದೆ. ತೈಲದ ಮೇಲಿನ ತೆರಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಿಟೇಲ್ ಸೇಲ್ಸ್ ಟ್ಯಾಕ್ಸ್ ದರ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿದೆ. ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತಕ್ಕೆ (North India) ಹೋಲಿಸಿದರೆ ದಕ್ಷಿಣ ಭಾರತದಲ್ಲೇ (South India) ತೈಲ ಬೆಲೆ ಏರಿಕೆ ಗಗನಕ್ಕೆ ಏರಿಕೆಯಾಗಿದೆ. ಹಾಗಾದರೆ ಯಾವ ರಾಜ್ಯಗಳ ನಗರಗಳಲ್ಲಿ? ಪೆಟ್ರೋಲ್, ಡೀಸೆಲ್ ದರ ಹೇಗಿದೆ ಎಂಬುದನ್ನ ನೋಡೋಣ…
ನಗರ – ಪೆಟ್ರೋಲ್ – ಡಿಸೇಲ್ ( ಬೆಲೆ ರೂ.ಗಳಲ್ಲಿ)
ನವದೆಹಲಿ – 94.72 – 87.62
ಕೋಲ್ಕತ್ತಾ – 103.94 – 90.76
ಮುಂಬೈ – 104.21 – 92.15
ಚೆನ್ನೈ – 100.75 – 92.34
ಗುರ್ಗಾಂವ್ – 94.90 – 87.76
ನೋಯ್ಡಾ – 94.72 – 87.83
ಭುವನೇಶ್ವರ್ – 100.97 – 92.55
ಚಂಡೀಗಢ – 94.24 – 82.40
ಹೈದರಾಬಾದ್ – 107.41 – 95.65
ಜೈಪುರ – 104.86 – 90.33
ಲಕ್ನೋ – 94.56 – 87.66
ಪಾಟ್ನಾ – 105.18 – 92.04
ತಿರುವನಂತಪುರ – 107.56 – 96.43
ಬೆಂಗಳೂರು – 102.85- 88.93
ತೆರಿಗೆ ದರ ಹೆಚ್ಚಳ ವಿವರ
ಪೆಟ್ರೋಲ್
ಹಿಂದಿನ ದರ – 25.92%
ಹೆಚ್ಚಳ ದರ – 29.84%
ಏರಿಕೆ – 3.9%
ಡಿಸೇಲ್
ಹಿಂದಿನ ದರ – 14.34%
ಹೆಚ್ಚಳದ ದರ – 18.44%
ಏರಿಕೆ – 4.1%
ಟ್ಯಾಕ್ಸ್ ಏರಿಕೆ ಬಳಿಕ ತೈಲದರ ಎಷ್ಟು?
ಪೆಟ್ರೋಲ್ ( ಪ್ರತಿ ಲೀಟರ್‌ಗೆ)
ಇವತ್ತಿನ ದರ – 99.54 ರೂ
ಏರಿಕೆ ಬಳಿಕ ದರ – 102 ರೂ
ಡಿಸೇಲ್ (ಪ್ರತಿ ಲೀಟರ್)
ಇವತ್ತಿನ ದರ – 85.93 ರೂ
ಏರಿಕೆ ಬಳಿಕ ದರ – 89.43 ರೂ