ನವದೆಹಲಿ: 70 ವರ್ಷಗಳಲ್ಲಿ ಕುಸಿಯದಿರುವ ರೂಪಾಯಿ ಮೌಲ್ಯ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ನೆಲಕಚ್ಚಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತ್ ಬಂದ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ, ಜನರಿಗೆ ಹಲವಾರು ಯೋಜನೆಗಳ ಕುರಿತು ಮಾತನ್ನು ಕೊಟ್ಟಿದ್ದರು. ಪ್ರಮುಖವಾಗಿ ಮಹಿಳೆಯರು, ಯುವಪೀಳಿಗೆ ಹಾಗೂ ರೈತರಿಗೆ ಹೆಚ್ಚಿನ ಭರಪೂರ ಭರವಸೆಯನ್ನು ನೀಡಿದ್ದರು. ತಮ್ಮ ಭಾಷಣಗಳಲ್ಲಿ ಪ್ರತಿ ಬಾರಿಯೂ ಕಳೆದ 70 ವರ್ಷಗಳಲ್ಲಿ ಆಗದಿರುವ ಬದಲಾವಣೆಯನ್ನು ನಾವು ಮಾಡುತ್ತೇನೆ ಎಂದು ಹೇಳುತ್ತಲೇ ಇದ್ದರು. ಆದರೆ ಅವರು ಇಂದು ಏನು ಮಾಡಿದ್ದಾರೆ, 70 ವರ್ಷಗಳಲ್ಲಿ ಕುಸಿಯದಿರುವ ರೂಪಾಯಿ ಮೌಲ್ಯ ಇವರ ಆಡಳಿತದಲ್ಲಿ ನೆಲಕಚ್ಚಿ ಹೋಗಿದೆ. ಪೆಟ್ರೋಲ್ ದರಗಳೂ ಸಹ ದಿನೇ ದಿನೇ ಗಗನಕ್ಕೇರುತ್ತಿವೆ. ಈಗಾಗಲೇ ಪೆಟ್ರೋಲ್ 80 ರೂಪಾಯಿ ದಾಟಿದ್ದು, ಡೀಸೆಲ್ ಸಹ 80 ರೂಪಾಯಿ ಸಮೀಪಕ್ಕೆ ಬಂದು ಕೂತಿದೆ ಎಂದು ತೀವ್ರವಾಗಿ ಕಿಡಿಕಾರಿದರು.
Advertisement
Narendra Modi ji is silent, he has not spoken a word on rising prices of fuel, or condition of farmers, neither on atrocities against women: Rahul Gandhi during #BharathBandh protests in Delhi pic.twitter.com/wURfFTXT1i
— ANI (@ANI) September 10, 2018
Advertisement
ಮೋದಿಯವರು ಯಾವಾಗಲೂ ದೇಶದ ತುಂಬಾ ಓಡಾಡುತ್ತಾ, ಬಡಾಯಿ ಕೊಚ್ಚಿಕೊಳ್ಳುವುದರಲ್ಲೇ ತಮ್ಮ ಸಮಯ ಕಳೆಯುತ್ತಿದ್ದಾರೆ. ಇದರ ಬದಲು ಅಭಿವೃದ್ಧಿ ಕೆಲಸ ಬಗ್ಗೆ ಗಮನ ಹರಿಸಬಹುದಿತ್ತು. ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತೀಯರಿಗೆ ನೀಡಿದ್ದ ಭರವಸೆಗಳ ಪೈಕಿ ಒಂದನ್ನೂ ಈಡೇರಿಸಿಲ್ಲವೆಂದು ಗಂಭೀರವಾಗಿ ಆರೋಪಿಸಿದರು.
Advertisement
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿಯೇ ದೇಶದಲ್ಲಿ ಅತ್ಯಾಚಾರಗಳು, ರೈತರ ಆತ್ಮಹತ್ಯೆಗಳು ಹಾಗೂ ನಿರುದ್ಯೋಗದ ಸಮಸ್ಯೆಗಳು ಹೆಚ್ಚಾಗಿ ಹೋಗಿವೆ. ಇವೆಲ್ಲದರ ಕುರಿತು ಅವರು ಮೌನವಹಿಸಿದ್ದಾರೆ. ಈ ಬಗ್ಗೆ ಜನಸಾಮಾನ್ಯರು ಪ್ರಶ್ನಿಸಿದರೆ, ಅದನ್ನು ಸಹ ಕೇಳಿಸಿಕೊಳ್ಳುವ ಸಮಯ ಅವರಿಗಿಲ್ಲ. ರಫೇಲ್ ಹಗರಣದ ಕುರಿತು ಪ್ರಶ್ನಿಸಿದರೆ ಅವರ ಬಳಿ ಉತ್ತರವೇ ಇಲ್ಲ. ಇದುವರೆಗೂ ನೋಟು ಅಮಾನ್ಯೀಕರಣದ ಬಗ್ಗೆ ನಿಖರವಾದ ಕಾರಣವನ್ನೇ ನೀಡುತ್ತಿಲ್ಲವೆಂದು ಆಕ್ರೋಶ ಹೊರಹಾಕಿದರು.
Advertisement
Delhi: Sonia Gandhi and former prime minister Manmohan Singh join Congress-led opposition parties supported bandh protest against fuel price hike. #BharatBandh pic.twitter.com/u5W6hfJzAJ
— ANI (@ANI) September 10, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv