ರಾಯಚೂರು: ಜಿಲ್ಲೆಯಲ್ಲಿ ಏಮ್ಸ್ (AIIMS) ಸ್ಥಾಪನೆಗಾಗಿ ನಡೆದಿರುವ ಅನಿರ್ಧಿಷ್ಟಾವಧಿ ಹೋರಾಟ 150ನೇ ದಿನಕ್ಕೆ ಕಾಲಿಟ್ಟಿದೆ. ಈಗಲೂ ಸರ್ಕಾರ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಕುಂಭಕರ್ಣನಿಗೆ (Kumbhakarna) ಹೋಲಿಸಿ ಪ್ರತಿಭಟನೆ (Protest) ಮಾಡಲಾಯಿತು.
Advertisement
ಪ್ರತಿಭಟನಾಕಾರರು ನಗರದ ಅಂಬೇಡ್ಕರ್ ವೃತ್ತದಲ್ಲಿ ಕುಂಭಕರ್ಣನ ದೇಹದ ಚಿತ್ರಕ್ಕೆ ಸಿಎಂ ಮುಖದ ಚಿತ್ರವನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವೃತ್ತದಲ್ಲಿ ಸಿಎಂ ಭಾವಚಿತ್ರಕ್ಕೆ ಅಪಮಾನ ಮಾಡಿ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿದರು. ರಸ್ತೆ ತಡೆ ನಡೆಸಿ ಹೋರಾಟ ಮಾಡಿದ್ದರಿಂದ ಕೆಲಕಾಲ ವಾಹನಗಳ ಸಂಚಾರ ಬಂದ್ ಆಗಿತ್ತು. ಇದನ್ನೂ ಓದಿ: ದಸರಾ ರಜೆಯಲ್ಲಿ ಶಿಕ್ಷಕನಿಂದ ಶಾಲಾ ಆವರಣದಲ್ಲಿ ಅರಳಿದ ಕಲಾಕೃತಿಗಳು- ಗ್ರಾಮಸ್ಥರ ಮೆಚ್ಚುಗೆ
Advertisement
Advertisement
ಇಚ್ಛಾ ಶಕ್ತಿ ಪ್ರದರ್ಶಿಸದ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಸಿಟ್ಟು ಹೊರಹಾಕಿದ ಹೋರಾಟಗಾರರು, ಅಕ್ಟೋಬರ್ 11 ರಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ ಎದುರು ಜಿಲ್ಲೆಯ 7 ಶಾಸಕರು ಏಮ್ಸ್ಗಾಗಿ ರಾಜೀನಾಮೆ ನೀಡಬೇಕು, ಜಿಲ್ಲೆಯ ಬಗೆಗೆ ಕಾಳಜಿ ತೋರಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸೀಗೆ ಹುಣ್ಣಿಮೆ ದಿನ ಪುನೀತ್ ರಾಜ್‌ಕುಮಾರ್ ಫೋಟೋ ಇಟ್ಟು ಹೊಲದ ಪೂಜೆ ಮಾಡಿದ ರೈತ