ಪಬ್ಲಿಕ್ ಟಿವಿ
ಬೆಂಗಳೂರು: ಕೊನೆ ಕ್ಷಣದಲ್ಲಿ ಕೈ ಮತ್ತು ತೆನೆಯ ಪಟ್ಟಿ ಅಂತಿಮಗೊಂಡಿದ್ದು, 15 ಮಂದಿ ಕೈ ಶಾಸಕರು ಮತ್ತು ತೆನೆಯ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರದೇಶವಾರು, ಜಾತಿವಾರು ಲೆಕ್ಕಾಚಾರಗಳನ್ನು ಮಾನದಂಡವಾಗಿಸಿ ಹೊಸ ಮುಖಗಳಿಗೆ ಅವಕಾಶ ನೀಡದಿರಲು ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರ ಮಾಡಿದೆ. ದೋಸ್ತಿ ಸರ್ಕಾರದಲ್ಲಿ ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ಸಿಕ್ಕಿದ್ದು, ಹಿರಿತನ, ಅನುಭವ, ಸಮುದಾಯದ ಆಧಾರದಲ್ಲಿ ಕೆಜೆ ಜಾರ್ಜ್,ಆರ್ ವಿ ದೇಶಪಾಂಡೆ ಅವರಿಗೆ ಮಂತ್ರಿಗಿರಿ ಸಿಕ್ಕಿದೆ.
Bengaluru: Congress' DK Shivakumar takes oath as minister in the #Karnataka Cabinet pic.twitter.com/fxGsZRJvmD
— ANI (@ANI) June 6, 2018
ಯಾವ ಜಾತಿಯರು ಎಷ್ಟಿದ್ದಾರೆ?
8 ಒಕ್ಕಲಿಗ, 4 ಲಿಂಗಾಯತ, 2 ಕುರುಬ, 2 ಮುಸ್ಲಿಮ್, 3 ಎಸ್‍ಸಿ ಸಮುದಾಯದವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಅದೇ ರೀತಿಯಾಗಿ ಕ್ರೈಸ್ತ, ರೆಡ್ಡಿ, ಎಸ್‍ಟಿ, ಉಪ್ಪಾರ, ಈಡಿಗ, ಬ್ರಾಹ್ಮಣ ಸಮುದಾಯದ ಒಬ್ಬೊಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.
ಮೈತ್ರಿ ಸರ್ಕಾರದ ಕಾಂಗ್ರೆಸ್ ಸಚಿವರುಗಳು
1. ಡಿ.ಕೆ.ಶಿವಕುಮಾರ್ – ಕನಕಪುರ – ಒಕ್ಕಲಿಗ
2. ಆರ್ .ವಿ.ದೇಶಪಾಂಡೆ – ಹಳಿಯಾಳ – ಬ್ರಾಹ್ಮಣ
3. ಕೃಷ್ಣ ಬೈರೇಗೌಡ – ಬ್ಯಾಟರಾಯನಪುರ – ಒಕ್ಕಲಿಗ
4. ರಾಜಶೇಖರ್ ಪಾಟೀಲ್ – ಹುಮ್ನಾಬಾದ್ – ಲಿಂಗಾಯತ
5. ಶಿವಾನಂದ ಪಾಟೀಲ್ – ಬಸವನ ಬಾಗೇವಾಡಿ – ಲಿಂಗಾಯತ
6. ಜಮೀರ್ ಅಹ್ಮದ್ – ಚಾಮರಾಜಪೇಟೆ – ಅಲ್ಪಸಂಖ್ಯಾತ
7. ಯು.ಟಿ.ಖಾದರ್ – ಮಂಗಳೂರು ಉತ್ತರ – ಅಲ್ಪಸಂಖ್ಯಾತ
8. ಶಂಕರ್ – ರಾಣೆಬೆನ್ನೂರು – ಕುರುಬ
9. ಕೆ.ಜೆ. ಜಾರ್ಜ್ – ಸರ್ವಜ್ಞ ನಗರ – ಕ್ರೈಸ್ತ
10. ಪುಟ್ಟರಂಗಶೆಟ್ಟಿ – ಚಾಮರಾಜನಗರ – ಉಪ್ಪಾರ
11. ಜಯಮಾಲ – ವಿಧಾನ ಪರಿಷತ್ ಸದಸ್ಯೆ – ಈಡಿಗ
12. ಪ್ರಿಯಾಂಕ್ ಖರ್ಗೆ – ಚಿತ್ತಾಪುರ – ಎಸ್‍ಸಿ
13. ವೆಂಕಟರಮಣಪ್ಪ – ಪಾವಗಡ – ಬೋವಿ
14. ರಮೇಶ್ ಜಾರಕಿಹೊಳಿ – ಗೋಕಾಕ್ – ಎಸ್‍ಟಿ
15. ಶಿವಶಂಕರ ರೆಡ್ಡಿ – ಗೌರಿಬಿದನೂರು – ರೆಡ್ಡಿ
ಮೈತ್ರಿ ಸರ್ಕಾರದ ಜೆಡಿಎಸ್ ಸಚಿವರುಗಳು
1. ಎಸ್.ಆರ್. ಗುಬ್ಬಿ ಶ್ರೀನಿವಾಸ್ -ಗುಬ್ಬಿ- ಒಕ್ಕಲಿಗ
2. ಎಚ್.ಡಿ. ರೇವಣ್ಣ – ಹೊಳೆನರಸಿಪುರ- ಒಕ್ಕಲಿಗ
3. ಬಂಡೆಪ್ಪ ಕಾಶೆಂಪುರ – ಬೀದರ್ ದಕ್ಷಿಣ – ಕುರುಬ
4. ಜಿಟಿ ದೇವೇಗೌಡ – ಚಾಮುಂಡೇಶ್ವರಿ- ಒಕ್ಕಲಿಗ
5. ಎಂ.ಸಿ. ಮನಗೂಳಿ – ಸಿಂಧಗಿ – ಲಿಂಗಾಯತ
6. ವೆಂಕಟರಾವ್ ನಾಡಗೌಡ – ಸಿಂಧನೂರು- ಲಿಂಗಾಯತ
7. ಸಿ.ಎಸ್. ಪುಟ್ಟರಾಜು – ಮೇಲುಕೋಟೆ – ಒಕ್ಕಲಿಗ
8. ಸಾ.ರಾ.ಮಹೇಶ್ – ಕೆ.ಆರ್ ನಗರ – ಒಕ್ಕಲಿಗ
9. ಎನ್. ಮಹೇಶ್ – ಕೊಳ್ಳೇಗಾಲ – ದಲಿತ
10. ಡಿ.ಸಿ. ತಮ್ಮಣ್ಣ – ಮದ್ದೂರು – ಒಕ್ಕಲಿಗ