ಚಿಕ್ಕೋಡಿ: ದುರ್ಗಾಮಾತಾ (Durgamataha) ವಿಸರ್ಜನೆ ಸಂದರ್ಭದಲ್ಲಿ ಮಸೀದಿ (Masjid) ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ದುರ್ಗಾ ಮಾತಾ ವಿಸರ್ಜನೆ ವೇಳೆ ಮಸೀದಿ ಎದುರು ಹಾಡು ಹಚ್ಚಿದ್ದಕ್ಕೆ ಹುಕ್ಕೇರಿ (Hukkeri) ತಾಲೂಕಿನ ಸೊಲ್ಲಾಪುರ (Solapur) ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಗಲಾಟೆ ಸಂಭವಿಸಿದೆ.
9 ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸಿ ಭಾನುವಾರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮಸೀದಿ ಎದುರು ಶಿವಾಜಿ (Shivaji) ಅಫ್ಜಲ್ ಖಾನ್ ಕೊಂದಿದ್ದ ಹಾಡನ್ನ ಹಾಕಿದ್ದರು. ಇದರಿಂದ ಕೋಪಗೊಂಡ ಒಂದು ಕೋಮಿನ ಗುಂಪು ಮೆರವಣಿಗೆ ಮುಗಿಸಿ ಬರುತ್ತಿದ್ದ ಯುವಕರ ಮೇಲೆ ರಾಡ್ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: Uttar Pradesh | ದುರ್ಗಾದೇವಿ ಮೂರ್ತಿ ವಿರ್ಸಜನೆ ವೇಳೆ ಕೋಮು ಸಂಘರ್ಷ – ಲಾಠಿ ಚಾರ್ಜ್, 30 ಮಂದಿ ಬಂಧನ
ಗಲಾಟೆಯಲ್ಲಿ 5 ಕ್ಕೂ ಹೆಚ್ಚು ಬೈಕುಗಳು ಹಾಗೂ ಎರಡು ಕಾರುಗಳಿಗೆ ಹಾನಿಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಇಲ್ಲಿಯವರೆಗೆ ಯಾರನ್ನು ಕೂಡ ವಶಕ್ಕೆ ಪಡೆದಿಲ್ಲ ಎನ್ನುವ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.