ಗಾಂಧಿನಗರ: ದೀಪಾವಳಿ ಹಬ್ಬದಂದು ((Diwali Festival) ಪಟಾಕಿ ಸಿಡಿಸುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ (Communal Clash) ಉಂಟಾಗಿದ್ದು, 19 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಗುಜರಾತ್‌ನಲ್ಲಿಂದು (Gujarat) ನಡೆದಿದೆ.
ಇಲ್ಲಿನ ವಡೋದರಾ ನಗರದ ಪಾಣಿಗೇಟ್ ಸೂಕ್ಷ್ಮ ಪ್ರದೇಶದಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಘಟನೆ ಸಂಭವಿಸಿದ ಸುಮಾರು ಒಂದು ಗಂಟೆಯ ನಂತರ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ
ಈ ವೇಳೆ ಕಿಡಿಗೇಡಿಗಳೂ ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ (Petrol Bomb) ದಾಳಿ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 19 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವಡೋದರಾ ಉಪ ಪೊಲೀಸ್ ಆಯುಕ್ತ ಯಶಪಾಲ್ ಜಗನಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಅಧಿಕಾರ ಬೇಕಿಲ್ಲ ಅಂದ್ರು ರಾಹುಲ್- ಶಾಕ್ ಕೊಟ್ಟ ಡಿಕೆಶಿ
ಘರ್ಷಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ರಾಕೆಟ್ ಪಟಾಕಿ ಸಿಡಿಸಿದ ಬಳಿಕ ಸ್ಥಳದಲ್ಲೇ ಇದ್ದ ಮೋಟಾರ್ ಸೈಕಲ್ ವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಪರಸ್ಪರ ಕಲ್ಲು ತೂರಾಟ ನಡೆದಿದೆ. ಕೆಲ ದಿನಗಳ ಹಿಂದೆ ರಾಮನವಮಿಯ ಸಂದರ್ಭದಲ್ಲೂ ಗುಜರಾತ್‌ನಲ್ಲಿ ದೊಡ್ಡ ಕೋಮು ಘರ್ಷಣೆ ನಡೆದಿತ್ತು.
Live Tv
[brid partner=56869869 player=32851 video=960834 autoplay=true]