ಬೆಂಗಳೂರು: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಬ್ಯಾಡ್ಮಿಟನ್ ತಾರೆ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ಡಿಸಿಎಂ ಪರಮೇಶ್ವರ್ ಸನ್ಮಾನ ಮಾಡಿ ಗೌರವಿಸಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಅಶ್ವಿನಿ ಪೊನ್ನಪ್ಪಗೆ ಶಾಲು ಪೇಟ ತೊಡಿಸಿ ಸನ್ಮಾನಿಸಿದ್ದಾರೆ. ಅಶ್ವಿನಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದಕ್ಕೆ ಸರ್ಕಾರ 25 ಲಕ್ಷ ರೂ. ಹಾಗೂ 8 ಲಕ್ಷ ರೂ. ನೀಡಿ ಗೌರವಿಸಿದೆ. ಪರಮೇಶ್ವರ್ ಜೊತೆ ಕರ್ನಾಟಕ ಒಲಿಂಪಿಕ್ ಅಧ್ಯಕ್ಷ ಗೋವಿಂದ್ ರಾಜ್ ಕೂಡ ಭಾಗಿಯಾಗಿದ್ದರು.
Advertisement
ಅಶ್ವಿನಿ ಪೊನ್ನಪ್ಪ ಕಾಮನ್‍ವೆಲ್ತ್ ಗೇಮ್ ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಸರ್ಕಾರ ಅವರಿಗೆ ಒಟ್ಟು 33 ಲಕ್ಷ ರೂ. ಪುರಸ್ಕಾರ ನೀಡಿದೆ. ಅವರ ಸಾಧನೆ ಇನ್ನಷ್ಟು ಬೆಳೆಯಲಿ. ರಾಜ್ಯಕ್ಕೆ ತಂದಿರುವ ಗೌರವಕ್ಕೆ ಅವರಿಗೆ ಈ ಪುರಸ್ಕಾರ ನೀಡಲಾಗಿದೆ. ಮುಂದಿನ ಪಂದ್ಯಗಳಲ್ಲಿ ಚಿನ್ನದ ಪದಕ ಪಡೆಯಲಿ ಎಂದು ಪರಮೇಶ್ವರ್ ಹೇಳಿದರು.
Advertisement
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವರಿಗೆ ಗೆದ್ದವರಿಗೆ 5 ಕೋಟಿ ರೂ. ಪುರಸ್ಕಾರ ಘೋಷಣೆ ಮಾಡಲಾಗಿದೆ. ಬೆಳ್ಳಿಗೆ 3 ಕೋಟಿ ರೂ. ಹಾಗೂ ಕಂಚಿಗೆ 2 ಕೋಟಿ ರೂ. ನೀಡಲು ಸರ್ಕಾರ ನಿರ್ಧಾರ ಮಾಡಲಾಗಿದೆ. ಅಶ್ವಿನಿ ಪೊನ್ನಪ್ಪ ಒಲಂಪಿಕ್ಸ್ ನಲ್ಲಿ ಪದಕ ಪಡೆಯಲಿ ಎಂದು ಡಿಸಿಎಂ ಪರಮೇಶ್ವರ್ ಹಾರೈಸಿದರು.