ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಮಹಿಳೆಯರ 62 ಕೆಜಿ ವಿಭಾಗದ ಕುಸ್ತಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಕುಸ್ತಿ ಪಟು ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದಿದ್ದಾರೆ.
Advertisement
ಫೈನಲ್‍ನಲ್ಲಿ ಕೆನಡಾದ ಅನಾ ಗಾಡಿನೆಜ್ ಗೊನ್ಜಾಲೆಜ್ ವಿರುದ್ಧ ಮೇಲುಗೈ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಈ ಪದಕದೊಂದಿಗೆ ಭಾರತಕ್ಕೆ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 8ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದನ್ನೂ ಓದಿ: CWG 2022: ಭಜರಂಗ್ ಪೂನಿಯಾ ಚಿನ್ನದ ಬೇಟೆ – ಭಾರತಕ್ಕೆ 7ನೇ ಚಿನ್ನ
Advertisement
What a comeback! @SakshiMalik achieves her best ever performance at the #commonwealthgames in style winning a ???? in the women’s freestyle ????♀️ 62 KG category @birminghamcg22 . This is team ???????? 8th Gold Medal at the ongoing #commonwealthgames2022 . #ekindiateamindia #b2022 pic.twitter.com/E6uA7x8oRX
— Team India (@WeAreTeamIndia) August 5, 2022
Advertisement
ಈ ಮೊದಲು ಪುರುಷರ 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ ಚಿನ್ನ, ಮಹಿಳೆಯರ 57 ಕೆಜಿ ವಿಭಾಗದ ಕುಸ್ತಿ ಫೈನಲ್‍ನಲ್ಲಿ ಅಂಶು ಮಲಿಕ್ ಬೆಳ್ಳಿ ಪದಕ ಗೆದ್ದು ಕುಸ್ತಿಯಲ್ಲಿ 2 ಪದಕದ ಬೇಟೆಯಾಡಿದ್ದರು. ಈ ಮೂಲಕ ಭಾರತ ತಂಡ ಈವರೆಗೆ 2022ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ 8 ಚಿನ್ನ, 8 ಬೆಳ್ಳಿ, 7 ಕಂಚು ಸೇರಿ ಒಟ್ಟು 23 ಪದಕ ಗೆದ್ದಂತಾಗಿದೆ. ಇದನ್ನೂ ಓದಿ: CWG 2022: ಕುಸ್ತಿಯಲ್ಲಿ ಬೆಳ್ಳಿ ಪದಕ ಬೇಟೆಯಾಡಿದ ಅಂಶು ಮಲಿಕ್
Advertisement
ಇದಲ್ಲದೇ ದೀಪಕ್ ಪುನಿಯಾ (ಪುರುಷರ 86 ಕೆಜಿ) ಫೈನಲ್‍ಗೆ ತಲುಪಿದ್ದು ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
Live Tv
[brid partner=56869869 player=32851 video=960834 autoplay=true]