ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಪುರುಷರ 65ಕೆಜಿ ವಿಭಾಗದ ಕುಸ್ತಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಕುಸ್ತಿ ಪಟು ಭಜರಂಗ್ ಪೂನಿಯಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
Advertisement
ಫೈನಲ್‍ನಲ್ಲಿ ಕೆನಡಾದ ಮೆಕ್‍ನೀಲ್ ಲಾಚ್ಲಾನ್ ವಿರುದ್ಧ ಮುನ್ನಡೆ ಸಾಧಿಸುತ್ತ ಸಾಗಿದ ಪೂನಿಯಾ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಈ ಪದಕದೊಂದಿಗೆ ಭಾರತಕ್ಕೆ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 7ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
Advertisement
Bajrang Punia with his own 'like a boss' moment! ????????????#CommonwealthGames | #B2022pic.twitter.com/clAZsqhglr
— The Bridge (@the_bridge_in) August 5, 2022
Advertisement
ಈ ಮೊದಲು ಮಹಿಳೆಯರ 57 ಕೆಜಿ ವಿಭಾಗದ ಕುಸ್ತಿ ಫೈನಲ್‍ನಲ್ಲಿ ಅಂಶು ಮಲಿಕ್ ಬೆಳ್ಳಿ ಪದಕ ಗೆದ್ದು ಕುಸ್ತಿಯಲ್ಲಿ ಪದಕದ ಬೇಟೆಗೆ ಆರಂಭ ನೀಡಿದ್ದರು. ಈ ಮೂಲಕ ಭಾರತ ತಂಡ ಈವರೆಗೆ 2022ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ 7 ಚಿನ್ನ, 8 ಬೆಳ್ಳಿ, 7 ಕಂಚು ಸೇರಿ ಒಟ್ಟು 22 ಪದಕ ಗೆದ್ದಂತಾಗಿದೆ.
Advertisement
ಇದಲ್ಲದೇ ಇಬ್ಬರು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ (ಮಹಿಳೆಯರ 62 ಕೆಜಿ) ಮತ್ತು ದೀಪಕ್ ಪೂನಿಯಾ (ಪುರುಷರ 86 ಕೆಜಿ) ಫೈನಲ್‍ಗೆ ತಲುಪಿದ್ದು ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.