ಲಂಡನ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 78 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್ ಬೆಳ್ಳಿ ಪದಕ ಗೆದ್ದ ಬಳಿಕ ನನಗೆ ಈ ಪದಕಕ್ಕೆ ತೃಪ್ತಿ ಇಲ್ಲ. ಬಂಗಾರದ ಪದಕ ಗೆಲ್ಲುವ ವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಪಣತೊಟ್ಟಿದ್ದಾರೆ.
Advertisement
ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯುತ್ತಿರುವ 22ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತುಲಿಕಾ ಮಾನ್ ಮಹಿಳೆಯರ 78 ಕೆಜಿ ವಿಭಾಗದ ಫೈನಲ್ನಲ್ಲಿ ಸ್ಕಾಟ್ಲೆಂಡ್ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಪರಾಭವಗೊಳ್ಳುವ ಮೂಲಕ ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತರಾಗಿ ಬೆಳ್ಳಿಪದಕ ಗೆದ್ದಿದ್ದರು. ಆ ಬಳಿಕ ಅನುಭವ ಹಂಚಿಕೊಂಡ ಅವರು, ನಾನು ಇಲ್ಲಿಗೆ ಬರುವ ಮುಂಚೆ ಬೆಳ್ಳಿ ಪದಕ ಗೆಲ್ಲುವ ಯೋಚನೆ ಮಾಡಿರಲಿಲ್ಲ. ಈ ಪದಕ ನನಗೆ ತೃಪ್ತಿಯಾಗಿಲ್ಲ. ಮುಂದಿನ ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನನ್ನ ಪದಕದ ಬಣ್ಣ ಬದಲಾಗಬೇಕು ಚಿನ್ನದ ಪದಕ ಗೆಲ್ಲಲೇ ಬೇಕು ಅಲ್ಲಿಯ ವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿ ಕಣ್ಣೀರಿಟ್ಟರು. ಇದನ್ನೂ ಓದಿ: Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ
Advertisement
Advertisement
ತುಲಿಕಾ ಮಾನ್ ತುಂಬಾ ಕಷ್ಟಪಟ್ಟು ಜೀವನ ಸಾಗಿಸಿದವರು. ಸಣ್ಣ ವಯಸ್ಸಿನಿಂದಲೇ ಹಲವು ಏಳುಬೀಳುಗಳನ್ನು ಕಂಡವರು. ಜೂಡೋ ಕ್ರೀಡೆಗಾಗಿ ಶ್ರಮಪಟ್ಟವರು. ತಮ್ಮ ತಾಯಿ ನೀಡಿದ ಪ್ರೋತ್ಸಾಹದಿಂದ ಜೊಡೋದಲ್ಲಿ ತೊಡಗಿಕೊಂಡು ಇದೀಗ ಪದಕ ವಿಜೇತರಾಗಿದ್ದಾರೆ. ಕಾಮನ್ವೆಲ್ತ್ ಟ್ರಯಲ್ನಲ್ಲಿ 78 ಕೆಜಿ ವಿಭಾಗದಲ್ಲಿ ಸ್ಪರ್ಧೆಗೂ ಮುನ್ನ 110 ಕೆ.ಜಿ ತೂಕವಿದ್ದ ತುಲಿಕಾ ಮಾನ್ ಆ ಬಳಿಕ 30 ಕೆಜಿ ತೂಕ ಇಳಿಕೆ ಮಾಡಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದರು. ಇದನ್ನೂ ಓದಿ: ಚಿನ್ನದ ಪದಕ ಗೆಲ್ಲಲು ಭಾರತದ ಮೀರಾಬಾಯಿ ಚಾನು ನನಗೆ ಸ್ಫೂರ್ತಿ ಎಂದ ಪಾಕ್ ವೇಟ್ ಲಿಫ್ಟರ್
Advertisement
ಈ ಹಿಂದೆ 2018 ಮತ್ತು 2019ರಲ್ಲಿ ಜೈಪುರ ಮತ್ತು ಇಂಗ್ಲೆಂಡ್ನಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್ಶಿಪ್ನಲ್ಲೂ ಪದಕ ವಿಜೇತೆಯಾಗಿದ್ದರು. ಇದೀಗ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ವಿಜೇತೆಯಾಗಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.