ಲಂಡನ್: ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಪಾಕಿಸ್ತಾನದ ವೇಟ್ ಲಿಫ್ಟರ್ ದಸ್ತಗೀರ್ ಭಟ್ ನನ್ನ ಈ ಸಾಧನೆಗೆ ಭಾರತದ ಮೀರಾಬಾಯಿ ಚಾನು ಸ್ಫೂರ್ತಿ ಎಂದು ಹಾಡಿ ಹೊಗಳಿದ್ದಾರೆ.
Advertisement
22ನೇ ಕಾಮನ್‍ವೆಲ್ತ್ ಗೇಮ್ಸ್‌ನ 109 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‍ನಲ್ಲಿ ಪಾಕಿಸ್ತಾನದ ವೇಟ್ ಲಿಫ್ಟರ್ ದಸ್ತಗೀರ್ ಭಟ್ ಒಟ್ಟು 405 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರು. ಇದು ಪಾಕಿಸ್ತಾನಕ್ಕೆ ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಸಿಕ್ಕಿರುವ ಮೊದಲ ಚಿನ್ನದ ಪದಕವಾಗಿದೆ. ಇದನ್ನೂ ಓದಿ: ರೇಣುಕಾ ಸಿಂಗ್ ಇನ್‍ಸ್ವಿಂಗ್ – ಜಸ್ಟ್ ವಾವ್ ಎಂದ ಕ್ರಿಕೆಟ್ ಪ್ರಿಯರು
Advertisement
Advertisement
24ರ ಹರೆಯದ ದಸ್ತಗೀರ್ ಭಟ್ ಸ್ನ್ಯಾಚ್‍ನಲ್ಲಿ 173 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‍ನಲ್ಲಿ 232 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಆ ಬಳಿಕ ಪದಕ ಗೆದ್ದ ಸಂಭ್ರಮ ಹಂಚಿಕೊಂಡ ದಸ್ತಗೀರ್ ಭಟ್, ನನ್ನ ಈ ಸಾಧನೆಗೆ ನಮ್ಮ ಪಕ್ಕದ ದೇಶ ಭಾರತದ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಸ್ಫೂರ್ತಿ. ನಾನು ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ಆ ಸಂದರ್ಭ ನನಗೆ ತುಂಬಾ ಸಂತೋಷ ನೀಡಿತ್ತು. ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿರುವ ಭಾರತದ ವೇಟ್ ಲಿಫ್ಟರ್‌ಗಳಾದ ಗುರ್‌ದೀಪ್ ಸಿಂಗ್ ಸಹಿತ ಹಲವರು ನನ್ನ ಸ್ನೇಹಿತರು. ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದರು. ಇದನ್ನೂ ಓದಿ: ಹೈಜಂಪ್‌ನಲ್ಲಿ ತೇಜಸ್ವಿನ್ ತೇಜಸ್ಸು, ವೇಟ್‌ಲಿಫ್ಟಿಂಗ್‌ನಲ್ಲಿ ಗುರ್‌ದೀಪ್ ಪರಾಕ್ರಮ- ಭಾರತಕ್ಕೆ ಮತ್ತೆರಡು ಕಂಚು
Advertisement
ಮಹಿಳೆಯರ ವಿಭಾಗದ 49 ಕೆಜಿ ವೇಟ್‍ಲಿಫ್ಟಿಂಗ್‍ನಲ್ಲಿ 201 ಕೆಜಿ ಭಾರ ಎತ್ತುವ ಮೂಲಕ ಮೀರಾಬಾಯಿ ಚಾನು ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಸ್ನ್ಯಾಚ್‍ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‍ನಲ್ಲಿ 113 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಮೀರಾಬಾಯಿ ಚಾನು 2014ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ, 2018ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೇ 2017ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲೂ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.