ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ರಣ ರೋಚಕ ಕಾದಾಟದ ನಡುವೆ ಭಾರತದ ಬ್ಯಾಟರ್ ಯಸ್ತಿಕಾ ಭಾಟಿಯಾ ಬಿದ್ದು ಸಹ ಆಟಗಾರ್ತಿಯರ ನಗುವಿಗೆ ಕಾರಣರಾದ ಪ್ರಸಂಗವೊಂದು ನಡೆದಿದೆ.
Advertisement
ಫೈನಲ್ ಪಂದ್ಯದಲ್ಲಿ ಗೆಲ್ಲಲು 162 ರನ್‍ಗಳ ಗುರಿಯನ್ನು ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರೂ ನಾಯಕಿ ಹರ್ಮನ್‍ಪ್ರೀತ್ ಕೌರ್, ಜೆಮಿಮಾ ರಾಡಿಗ್ರಾಸ್ ಹೋರಾಟದಿಂದ ಗೆಲುವಿನ ಹಂತದವರೆಗೆ ತಲುಪಿತ್ತು. ಈ ವೇಳೆ ಯಸ್ತಿಕಾ ಭಾಟಿಯಾ 9ನೇ ಕ್ರಮಾಂಕದಲ್ಲಿ ಬ್ಯಾಟರ್ ಆಗಿ ಬರಲು ಸಿದ್ಧರಾಗಿದ್ದರು. ಒಂದು ಕಡೆ ಪಂದ್ಯ ರೋಚಕ ಘಟ್ಟ ತಲುಪಿತ್ತು. ಈ ವೇಳೆ ಒತ್ತಡದಲ್ಲೇ ಡಗೌಟ್‍ನಿಂದ ಬಂದ ಯಸ್ತಿಕಾ ಭಾಟಿಯಾ ಡಗೌಟ್ ಬಳಿ ಇದ್ದ ಜಾಹೀರಾತು ಬೋರ್ಡ್ ನೋಡದೆ ಕೆಳಕ್ಕೆ ಬಿದ್ದರು. ಆ ಬಳಿಕ ಎದ್ದು ಬ್ಯಾಟಿಂಗ್‍ಗೆ ಆಗಮಿಸಿದರು. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್ ಸಾಧನೆ – ಪಿವಿ ಸಿಂಧುಗೆ ಚಿನ್ನ
Advertisement
Advertisement
ಇತ್ತ ಯಸ್ತಿಕಾ ಭಾಟಿಯಾ ಬಿದ್ದು, ಎದ್ದು ಬ್ಯಾಟಿಂಗ್‍ಗೆ ಆಗಮಿಸುತ್ತಿದ್ದಂತೆ ಬೌಂಡರಿ ಲೈನ್ ಪಕ್ಕ ಕೂತಿದ್ದ ನಾಯಕಿ ಹರ್ಮನ್‍ಪ್ರೀತ್ ಕೌರ್, ಸ್ಮೃತಿ ಮಂದಾನ ಸೇರಿದಂತೆ ಸಹ ಆಟಗಾರ್ತಿಯರು ಬಿದ್ದು, ಬಿದ್ದು ನಕ್ಕರು. ಇದನ್ನೂ ಓದಿ: ನಾಲ್ಕು ವರ್ಷಗಳ ಹಿಂದೆ ಪದಕ ಗೆದ್ದಾಗ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ – ಬೇಸರ ವ್ಯಕ್ತಪಡಿಸಿದ ಗುರುರಾಜ್ ಪೂಜಾರಿ
Advertisement
Thats the summary of today's match #INDvsAUS pic.twitter.com/ENSYvpGKIq
— Darshan S. Bhosale (@DarshanBhosale2) August 7, 2022
ಪಂದ್ಯದಲ್ಲಿ ಗೆಲ್ಲಲು 162 ರನ್‍ಗಳ ಗುರಿಯನ್ನು ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರೂ ನಾಯಕಿ ಹರ್ಮನ್‍ಪ್ರೀತ್ ಕೌರ್, ಜೆಮಿಮಾ ರಾಡಿಗ್ರಾಸ್ ಹೋರಾಟದಿಂದ ಗೆಲುವಿನ ಹಂತದವರೆಗೆ ತಲುಪಿತ್ತು. ಆದರೆ ಕೊನೆಯಲ್ಲಿ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಅಂತಿಮವಾಗಿ 19.3 ಓವರ್‌ಗಳಲ್ಲಿ 152 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಟೀಂ ಇಂಡಿಯಾದ ಮಹಿಳೆಯರು ಸ್ವಲ್ಪದರಲ್ಲೇ ಚಿನ್ನದ ಪದಕದಿಂದ ವಂಚಿತರಾದರು. ರೋಚಕ ಫೈನಲ್‍ನಲ್ಲಿ ಆಸ್ಟ್ರೇಲಿಯಾ 9 ರನ್‍ಗಳಿಂದ ಇಂಡಿಯಾವನ್ನು ಸೋಲಿಸಿ ಚೊಚ್ಚಲ ಪದಕವನ್ನು ಮುಡಿಗೇರಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಸೇರಿಸಲಾಗಿತ್ತು. ಇದನ್ನೂ ಓದಿ: Well Done Girls: ಗೋಲ್ಡ್ ಜಸ್ಟ್ ಮಿಸ್ – ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿಗೆದ್ದ ವನಿತೆಯರು
Live Tv
[brid partner=56869869 player=32851 video=960834 autoplay=true]