ಬರ್ಮಿಂಗ್‌ಹ್ಯಾಮ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ 7ನೇ ದಿನವೂ ಉತ್ತಮ ಪ್ರದರ್ಶನದೊಂದಿಗೆ ಹೊರಹೊಮ್ಮಿದ್ದು, ಒಂದು ಚಿನ್ನ ಮತ್ತೊಂದು ಬೆಳ್ಳಿ ಪದಕವನ್ನು ಪಡೆದುಕೊಂಡಿದೆ.
Advertisement
7ನೇ ದಿನದ ಆಟದ ಪುರುಷರ ವಿವಿಭಾಗದ ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿಪದಕ ಗೆದ್ದ ಮೊದಲ ಪುರುಷ ಎಂಬ ಖ್ಯಾತಿಯೂ ಇವರದ್ದಾಗಿದೆ. ಇದನ್ನೂ ಓದಿ: ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು
Advertisement
SOARING HIGH ????????
???? #SreeshankarMurali after the historic feat at #CommonwealthGames in Men's Long Jump ????????#Cheer4India #India4CWG2022 pic.twitter.com/BdPt80MQwo
— SAI Media (@Media_SAI) August 4, 2022
Advertisement
ಮುರಳಿ ಶ್ರೀಶಂಕರ್ 8.08ಮೀ ಉದ್ದ ಜಿಗಿತದ ಮೂಲಕ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಗೆದ್ದುಕೊಂಡಿದ್ದಾರೆ. ಈ ಹಿಂದೆ ಹಿರಿಯ ಕ್ರೀಡಾಪಟು ಸುರೇಶ್‌ಬಾಬು 1978ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದರು. ಇದಾದ 44 ವರ್ಷಗಳ ಬಳಿಕ ಬೆಳ್ಳಿ ಪಡೆದಿದ್ದಾರೆ. ನಿನ್ನೆ ಎತ್ತರ ಜಿಗಿತದಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದಿದ್ದಾರೆ.