LatestLeading NewsMain PostSports

CWG 2022: ಬಾಕ್ಸಿಂಗ್‍ನಲ್ಲಿ ಮೊದಲ ಪದಕ – ಕಂಚು ಗೆದ್ದ ಜಾಸ್ಮಿನ್ ಲಂಬೋರಿಯಾ

Advertisements

ಲಂಡನ್: 22ನೇ ಕಾಮನ್‍ವೆಲ್ತ್ ಕ್ರೀಡಾಕೂಟದ 9ನೇ ದಿನ ಭಾರತಕ್ಕೆ ಬಾಕ್ಸಿಂಗ್‍ನಲ್ಲಿ ಮೊದಲ ಪದಕ ಸಿಕ್ಕಿದೆ. ಮಹಿಳೆಯರ 57-60 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಜಾಸ್ಮಿನ್ ಲಂಬೋರಿಯಾ ಕಂಚಿನ ಪದಕ ಗೆದ್ದಿದ್ದಾರೆ.

ಇಂಗ್ಲೆಂಡ್‍ನ ಗೆಮ್ಮಾ ರಿಚರ್ಡ್‌ಸನ್‌ ವಿರುದ್ಧ 2-3 ಅಂತರದಿಂದ ಗೆದ್ದ ಬಾಕ್ಸರ್‌ ಜಾಸ್ಮಿನ್ ಲಂಬೋರಿಯಾ ಕಂಚಿನ ಹಾರ ಹಾಕಿಸಿಕೊಂಡರು. ಇದನ್ನೂ ಓದಿ: CWG 2022: ಲಾನ್ ಬಾಲ್ಸ್‌ನಲ್ಲಿ ರಜತ ಪದಕ ಗೆದ್ದ ಭಾರತದ ಪುರುಷರ ತಂಡ

ಈ ಮೂಲಕ ಭಾರತ 9ನೇ ದಿನ 4ನೇ ಪದಕ ಗೆದ್ದಂತಾಗಿದೆ. ಈ ಮೊದಲು ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿ, ಲಾನ್ ಬಾಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಬಾಕ್ಸಿಂಗ್‍ನಲ್ಲಿ ಕಂಚಿನ ಪದಕದೊಂದಿಗೆ ಜಾಸ್ಮಿನ್ ಲಂಬೋರಿಯಾ ಇತರ ಬಾಕ್ಸರ್‌ಗಳಿಗೆ ಹುರುಪು ನೀಡಿದ್ದಾರೆ.

ಈ ಮೂಲಕ ಭಾರತ ತಂಡ ಕಾಮನ್‌ವೆಲ್ತ್‌ 2022ರಲ್ಲಿ 9 ಚಿನ್ನ, 11 ಬೆಳ್ಳಿ, 10 ಕಂಚಿನ ಪದಕದೊಂದಿಗೆ ಒಟ್ಟು 30 ಪದಕ ಬಾಚಿಕೊಂಡು ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ. ಇದನ್ನೂ ಓದಿ: CWG 2022: ಇಂಗ್ಲೆಂಡ್ ವಿರುದ್ಧ 4 ರನ್‍ಗಳ ರೋಚಕ ಜಯ – ಫೈನಲ್‍ಗೆ ಲಗ್ಗೆಯಿಟ್ಟ ಭಾರತ

Live Tv

Leave a Reply

Your email address will not be published.

Back to top button