ಬರ್ಮಿಂಗ್‍ಹ್ಯಾಮ್: ಮಂಗಳವಾರ ಕಾಮನ್‍ವೇಲ್ತ್ ಕ್ರೀಡಾಕೂಟದಲ್ಲಿ ಭಾರತದ ಪಾಲಿಗೆ ಸುವರ್ಣ ದಿನವಾಗಿದ್ದು, ಭಾರತವು ಮೊದಲ ಪಂದ್ಯದಲ್ಲಿ, ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡವು ಫೈನಲ್‍ನಲ್ಲಿ ದಕ್ಷಿಣ ಆಫ್ರಿಕಾವನ್ನು 17-10 ರಿಂದ ಸೋಲಿಸುವ ಮೂಲಕ ಕ್ರೀಡೆಯಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದುಕೊಂಡಿತ್ತು. ಇದೀಗ ಪುರುಷರ ವಿಭಾಗವು ಟೇಬಲ್ ಟೆನಿಸ್‍ನಲ್ಲಿ ಚಿನ್ನವನ್ನು ಗೆದ್ದಿದೆ.
ಇದೀಗ ಸಿಂಗಾಪುರ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 3-1 ಅಂತರದಲ್ಲಿ ಗೆಲುವು ದಾಖಲಿಸಿರುವ ತಂಡ ಭಾರತಕ್ಕೆ 5ನೇ ಚಿನ್ನದ ಪದಕವನ್ನು ತಂದುಕೊಟ್ಟಿದೆ. ಈ ಮೂಲಕ ಇಂದೇ 2 ಚಿನ್ನ ಹಾಗೂ ಒಂದು ಬೆಳ್ಳಿ ಭಾರತಕ್ಕೆ ಬಂದಿದೆ. ಇದನ್ನೂ ಓದಿ: ಲಾನ್ ಬಾಲ್ಸ್‌ನಲ್ಲಿ ಇತಿಹಾಸ ಸೃಷ್ಟಿ – ಚಿನ್ನ ಗೆದ್ದ ವನಿತೆಯರು
Advertisement
Advertisement
ಚಂತಾ ಕಮಲ್ ನಾಯಕತ್ವದ ತಂಡ ಈ ಹಿಂದೆ ಬಾರ್ಬಡೋಸ್, ಉತ್ತರ ಐರ್ಲೆಂಡ್, ಬಾಂಗ್ಲಾದೇಶದ ವಿರುದ್ಧ ಗೆಲುವು ದಾಖಲಿಸಿತ್ತು.
Advertisement
ಇನ್ನುಳಿದಂತೆ ಭಾರತದ ಬ್ಯಾಡ್ಮಿಂಟನ್ ತಂಡವು ಮಿಕ್ಸೆಡ್ ಟೀಮ್ ಫೈನಲ್‍ನಲ್ಲಿ ಮಲೇಷ್ಯಾವನ್ನು ಎದುರಿಸುವುದರಿಂದ ಭಾರತಕ್ಕೆ ಮತ್ತೊಂದು ಪದಕ ಬರುವ ನೀರಿಕ್ಷೆಯಿದೆ. ಇದನ್ನೂ ಓದಿ: ಏಷ್ಯಾ ಕಪ್ – ಭಾರತ್, ಪಾಕ್ ಪಂದ್ಯಕ್ಕೆ ಡೇಟ್ ಫಿಕ್ಸ್
Advertisement
ಅಥ್ಲೆಟಿಕ್ಸ್‌ನಲ್ಲಿ ಮುರಳಿ ಶ್ರೀಶಂಕರ್ ಮತ್ತು ಮುಹಮ್ಮದ್ ಅನೀಸ್ ಯಾಹಿಯಾ ಪುರುಷರ ಲಾಂಗ್ ಜಂಪ್ ಫೈನಲ್‍ಗೆ ಅರ್ಹತೆ ಪಡೆದಿದ್ದಾರೆ. ಹಾಗೂ ಸ್ಟಾರ್ ಶಾಟ್‍ಪುಟ್ ಆಟಗಾರ್ತಿ ಮನ್‍ಪ್ರೀತ್ ಕೌರ್ ಫೈನಲ್‍ಗೆ ಅರ್ಹತೆ ಪಡೆದಿದ್ದಾರೆ.