ಲಂಡನ್: ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‌ನ ಲಾನ್ ಬಾಲ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿದ್ದ ಟಿಪ್ಸ್ ನೆರವಾಯಿತು ಎಂದು ಲಾನ್ ಬಾಲ್ಸ್ ಆಟಗಾರ್ತಿ ಲೌಲಿ ಚೌಬೆ ಧೋನಿಗೆ ಧನ್ಯವಾದ ತಿಳಿಸಿದ್ದಾರೆ.
Advertisement
ಚಿನ್ನದ ಪದಕ ಗೆದ್ದ ಬಳಿಕ ಸಂಭ್ರಮ ಹಂಚಿಕೊಂಡ ಅವರು, ಧೋನಿ, ಲಾನ್ ಬೌಲ್ ಆಟದ ಬಗ್ಗೆ ಅದ್ಭುತ ಜ್ಞಾನ ಹೊಂದಿದ್ದಾರೆ. ರಾಂಚಿಯಲ್ಲಿದ್ದಾಗ ಲಾನ್ ಬೌಲ್ ಆಟಗಾರರನ್ನು ಭೇಟಿಯಾಗುತ್ತಿದ್ದರು. ಧೋನಿ ಸರ್‌ಗೆ ನಮ್ಮ ತಂಡದ ಪರಿಚಯವಿದೆ. ನಾವು ಅಭ್ಯಾಸ ಮಾಡುತ್ತಿದ್ದ ಜಾಗ ರಾಂಚಿಯಲ್ಲಿರುವ ದೇವ್ರ ಮಟ ದೇವಸ್ಥಾನಕ್ಕೆ ಹತ್ತಿರವಿದೆ. ಧೋನಿ ದೇವಸ್ಥಾನಕ್ಕೆ ಬಂದಾಗಲೆಲ್ಲಾ, ನಮ್ಮನ್ನು ನೋಡೋಕೆ ಬರುತ್ತಿದ್ದರು. ನಮ್ಮ ಜೊತೆ ಲಾನ್ ಬಾಲ್ಸ್ ಆಟದ ಬಗ್ಗೆ ಚರ್ಚಿಸುತ್ತಿದ್ದರು. ನಮಗೆ ಕೆಲವೊಂದು ಟಿಪ್ಸ್ ನೀಡುತ್ತಿದ್ದರು. ನಾನು ಆಸ್ಟ್ರೇಲಿಯಾಕ್ಕೆ ಹೋದಾಗಲೆಲ್ಲಾ ಲಾನ್ ಬೌಲ್ಸ್ ಆಡುತ್ತಿದ್ದೆ ಎಂದು ಧೋನಿ ಹೇಳುತ್ತಿದ್ದರು ಎಂದು ಧೋನಿ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಈ ಒಂದು ಸಣ್ಣ ತಪ್ಪಿನಿಂದ ಚಿನ್ನದ ಪದಕ ಕೈತಪ್ಪಿತು – ಪಿ.ವಿ.ಸಿಂಧು ವಿಷಾದ
Advertisement
Advertisement
ಈ ಮೂಲಕ ಧೋನಿ ಕ್ರಿಕೆಟ್ ಮಾತ್ರವಲ್ಲ, ಫುಟ್‍ಬಾಲ್, ಲಾನ್ ಬಾಲ್ಸ್ ಸೇರಿದಂತೆ ಇತರ ಆಟದಲ್ಲೂ ಆಸಕ್ತಿ ಹೊಂದಿದ್ದಾರೆ ಎಂಬುದು ಮತ್ತೊಮ್ಮೆ ಸಾಭೀತಾಗಿದ್ದು, ಧೋನಿ ಟಿಪ್ಸ್ ಕೂಡ ಕಾಮನ್‍ವೆಲ್ತ್‌ನಲ್ಲಿ ಚಿನ್ನ ಗೆಲ್ಲಲು ನೆರವಾಗಿದ್ದು ಧೋನಿ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಧೋನಿ ಕೇವಲ ಕ್ರಿಕೆಟ್‍ನಲ್ಲಿ ಮಾತ್ರ ಗೇಮ್ ಚೆಂಜರ್ ಅಲ್ಲ ಲಾನ್ ಬಾಲ್ಸ್‌ನಲ್ಲೂ ಗೇಮ್ ಚೆಂಜರ್ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಲಾನ್ ಬಾಲ್ಸ್‌ನಲ್ಲಿ ಇತಿಹಾಸ ಸೃಷ್ಟಿ – ಚಿನ್ನ ಗೆದ್ದ ವನಿತೆಯರು
Advertisement
ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಲಾನ್ ಬಾಲ್ಸ್ ತಂಡ ಇತಿಹಾಸ ಸೃಷ್ಟಿಸಿದೆ. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಭಾರತ ಚಿನ್ನದ ಪದಕನ್ನು ಗೆದ್ದುಕೊಂಡಿತ್ತು. ಲೌಲಿ ಚೌಬೆ, ಪಿಂಕಿ, ನಯನ್‍ಮೊನಿ ಸೈಕಿಯಾ ಹಾಗೂ ರೂಪಾ ರಾಣಿ ತಿರ್ಕೆ ಅವರನ್ನೊಳಗೊಂಡ ತಂಡವು ದಕ್ಷಿಣ ಆಫ್ರಿಕಾವನ್ನು 17-10 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತ್ತು.