LatestLeading NewsMain PostSports

ಕಾಮನ್‌ವೆಲ್ತ್‌ನಲ್ಲಿ ಭಾರತದ ಕಮಾಲ್- ಸ್ಕ್ವಾಷ್‌ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್

Advertisements

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ 6ನೇ ದಿನದ ಆಟದಲ್ಲಿ ಭಾರತೀಯ ಕ್ರೀಡಾಪಟುಗಳು ಕಮಾಲ್ ಮಾಡಿದ್ದು, ಹಲವು ಪದಕಗಳನ್ನ ಬಾಚಿಕೊಂಡಿದ್ದಾರೆ.

ಭಾರತದ ಸೌರವ್ ಘೋಷಾಲ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅವರು ಇತಿಹಾಸದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಸಿಂಗಲ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್

ಇಂದು ನಡೆದ ಸ್ಕ್ವಾಷ್‌ ಪಂದ್ಯದಲ್ಲಿ 35 ವರ್ಷದ ಸೌರವ್ ಘೋಷಾಲ್ ಅವರು ಆತಿಥೇಯ ಇಂಗ್ಲೆಂಡ್ ಆಟಗಾರ ಜೇಮ್ಸ್ ವಿ‌ಲ್‌ಸ್ಟ್ರೋವ್‌ ಅವರನ್ನು 3-0 (11-6, 11-1, 11-4) ಅಂತರದಿಂದ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

1998 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ಅನ್ನು ಸೇರಿಸಲಾಯಿತು. ಆಗ ಆಗ ಭಾರತ 4 ಪದಕಗಳನ್ನು ಮಾತ್ರವೇ ಪಡೆದುಕೊಂಡಿತ್ತು. ಇದರಲ್ಲಿ ಕೊನೆಯ 3 ಪದಕಗಳು ಬಂದಿದ್ದು ಡಬಲ್ಸ್‌ನಲ್ಲಿ ಮಾತ್ರ. ಇದೇ ಮೊದಲಬಾರಿಗೆ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಪದಕ ಬಂದಿದ್ದು, ದಾಖಲೆ ನಿರ್ಮಾಣವಾಗಿದೆ.

Live Tv

Leave a Reply

Your email address will not be published.

Back to top button