ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರನೇ ಚಿನ್ನ ಲಭಿಸಿದೆ.
ಶನಿವಾರ ನಡೆದ ಪುರುಷರ 77ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಸತೀಶ್ ಕುಮಾರ್ ಶಿವಲಿಂಗಂ ಅವರು ಚಿನ್ನದ ಪದಕಕ್ಕೆ ಮತ್ತಿಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ 5 ಪದಕಗಳು ಬಂದಿವೆ. ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್ನಲ್ಲಿ ಸಂಜಿತಾ ಚಾನುಗೆ ಗೋಲ್ಡ್
Advertisement
Advertisement
ಸತೀಶ್ ಕುಮಾರ್ ಅವರು ಒಟ್ಟು 317 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. ಇವರಿಗೆ ಇಂಗ್ಲೆಂಡ್ ನ ಜಾಕ್ ಒಲಿವರ್ ತೀವ್ರ ಪೈಪೋಟಿ ನೀಡಿದ್ದಾರೆ. ಆದ್ರೆ ಜಾಕ್ ಎರಡನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಆಸ್ಟ್ರೇಲಿಯಾದ ಫ್ರಾಂಕೋಯಿಸ್ ಇಟೌಂಡಿ ಒಟ್ಟು 305 ಕೆ.ಜಿ ಎತ್ತುವ ಮೂಲಕ ಮೂರನೇ ಸ್ಥಾನಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡ್ರು. ಇದನ್ನೂ ಓದಿ: ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ
Advertisement
Advertisement
ಶುಕ್ರವಾರ ಆರಂಭವಾದ ಕ್ರೀಡಾಕೂಟದಲ್ಲಿ ಸಂಜಿತಾ ಚಾನು(ಚಿನ್ನ), ದೀಪಕ್ ಲತೇರ್(ಕಂಚು), ಮೀರಾಬಾಯಿ ಚಾನು ಹಾಗೂ ಗುರುರಾಜ್ ಪೂಜಾರಿ ಅವರು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್