ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರಕ್ಕೆ ಸವಾಲಾಗಿದ್ದ ಸಾಲಮನ್ನಾಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ (ಸಿಎಂಪಿ) ಸಮ್ಮತಿ ನೀಡಿದೆ. ಆದರೆ, ಸಂಪೂರ್ಣ ಸಾಲಮನ್ನಾ ಬದಲಿಗೆ ಬೆಳೆ ಸಾಲಮನ್ನಾಕ್ಕೆ ಮಾತ್ರ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಹೆಚ್. ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ್ ನೇತೃತ್ವದ ಕರಡು ಸಮಿತಿಯ ವರದಿ ನಾಳೆ ಸಮನ್ವಯ ಸಮಿತಿಗೆ ರವಾನೆಯಾಗಲಿದೆ. ನಾಡಿದ್ದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಮನ್ವಯ ಸಮಿತಿಯ ಸಭೆ ನಡೆಯಲಿದ್ದು, ಅಲ್ಲಿ ಒಪ್ಪಿಗೆ ಸಿಕ್ಕರೆ ಅನುಷ್ಠಾನಕ್ಕೆ ಬರಲಿದೆ.
ಸಿಎಂಪಿ ನಿರ್ಧಾರ ಏನು?
* ಸದ್ಯಕ್ಕೆ ಸಂಪೂರ್ಣ ಸಾಲಮನ್ನಾ ಇಲ್ಲ
* ಕೇವಲ ಬೆಳೆ ಸಾಲ ಮಾತ್ರ ಮನ್ನಾ
* ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ
* ಏಪ್ರಿಲ್ 1, 2009ರಿಂದ ಮೇ 31, 2018ರವರೆಗಿನ ಸಾಲ ಮನ್ನಾ
* ಗರ್ಭಿಣಿಯರಿಗೆ ಮಾಸಿಕ 6,000 ಭತ್ಯೆ
* ಮಗು ಹುಟ್ಟುವ 3 ತಿಂಗಳು ಮುನ್ನ, ಹುಟ್ಟಿದ 3 ತಿಂಗಳ ನಂತರ ಭತ್ಯೆ
* ಸದ್ಯಕ್ಕೆ ವೃದ್ಧಾಪ್ಯ ವೇತನ ಹೆಚ್ಚಳ ಇಲ್ಲ.
Advertisement
Advertisement
ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ (ಸಿಎಂಪಿ)ಯಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ಮಾತಿನ ಸಮರವೇ ನಡೆದಿದೆ. ಸಾಲಮನ್ನಾಕ್ಕೆ ಜೆಡಿಎಸ್ ಬಿಗಿಪಟ್ಟು ಹಿಡಿದರೆ, ಕಾಂಗ್ರೆಸ್ ಸದಸ್ಯರು ಸಂಪನ್ಮೂಲ ಕ್ರೋಢಿಕರಣ ಹೇಗೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಅನುದಾನ ಕಡಿತ ಬಗ್ಗೆಯೂ ಚರ್ಚೆ ಆಗಿದೆ. ಇಷ್ಟಕ್ಕೂ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಮಧ್ಯೆ ಚರ್ಚೆಯಾ ಪ್ರಮುಖ ಅಂಶಗಳು ಇಂತಿದೆ.
Advertisement
ಸಿಎಂಸಿ ಸಭೆ ಪ್ರಮುಖ ಚರ್ಚೆ ವಿಷಯಗಳು:
* ಸಂಪೂರ್ಣ ಸಾಲಕ್ಕೆ ಜೆಡಿಎಸ್ ಸದಸ್ಯರ ಪಟ್ಟು
* ಬೆಳೆ ಸಾಲಮನ್ನಾಕ್ಕೆ ಮಾತ್ರ ಸಮ್ಮತಿಸಿದ ಕಾಂಗ್ರೆಸ್
* ಸಂಪನ್ಮೂಲ ಕ್ರೋಢೀಕರಣ ಪ್ರಶ್ನಿಸಿದ ಕಾಂಗ್ರೆಸ್
* 34 ಸಾವಿರ ಕೋಟಿ ಬ್ಯಾಂಕುಗಳಿಗೆ ನೇರ ವರ್ಗಾವಣೆ
* ಉಳಿದ ಹಣ ತೆಲಂಗಾಣ ಸರ್ಕಾರ ಮಾದರಿಯಲ್ಲಿ ಬಾಂಡ್‍ಗಳ ಮೂಲಕ ಸಲ್ಲಿಕೆ
* ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಅನುದಾನ ಕಡಿತಕ್ಕೆ ಜೆಡಿಎಸ್ ಕಣ್ಣು
* ಇಂದಿರಾ ಕ್ಯಾಂಟೀನ್‍ಗೂ ಜೆಡಿಎಸ್ ಆಕ್ಷೇಪ
* ಜನಪ್ರಿಯ ಯೋಜನೆಗೆ ಅಡ್ಡಗಾಲು ಬೇಡ ಅಂದ ಕಾಂಗ್ರೆಸ್.