– ಜನ ರಸ್ತೆಯಲ್ಲಿ ಬಿದ್ದರೂ ಕಂಪನಿ ಕ್ಯಾರೇ ಎಂದಿಲ್ಲ
ಹೈದರಾಬಾದ್: ನೋಡನೋಡುತ್ತಿದ್ದಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಿಕ್ಕಮಕ್ಕಳು ಸೇರಿದಂತೆ ಎಲ್ಲರೂ ಬೀಳುತ್ತಿದ್ದಾರೆ. ಆದರೆ ಕಂಪನಿ ಸಿಬ್ಬಂದಿ ಮಾತ್ರ ಸಹಾಯಕ್ಕೆ ಬರುತ್ತಿಲ್ಲ ಎಂದು ವಿಶಾಖಪಟ್ಟಣಂನಲ್ಲಿ ನಡೆದ ದುರಂತವನ್ನು ಪ್ರತ್ಯಕ್ಷದರ್ಶಿ ಯುವಕನೊಬ್ಬ ವಿವರಿಸಿದ್ದಾನೆ. ಇದನ್ನೂ ಓದಿ: ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಟನ್ ವಿಷಾನಿಲ ಸೋರಿಕೆ
ನಾನು ಮನೆಯಿಂದ ಹೊರಗಡೆ ಬಂದ ತಕ್ಷಣ ಯಾವುದೋ ಗಾಳಿ ಬರುತ್ತಿತ್ತು. ಅದು ಏನು ಅಂತ ನನಗೆ ಗೊತ್ತಾಗಿಲ್ಲ. ಆದರೆ ಮಕ್ಕಳು ಸೇರಿದಂತೆ ನಡೆದುಕೊಂಡು ಹೋಗುತ್ತಿದ್ದರೆಲ್ಲಾ ರಸ್ತೆಯ ಮೇಲೆ ಬೀಳುತ್ತಿದ್ದರು. ನಮ್ಮ ಅಮ್ಮ ಕೂಡ ಕೆಳಗೆ ಬಿದ್ದರು. ನನಗೆ ಗಾಬರಿಯಲ್ಲಿ ಏನು ಮಾಡಬೇಕು ಎಂದು ಗೊತ್ತಾಗಿಲ್ಲ. ಆದರೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದೆ ಎಂದಿದ್ದಾನೆ. ಇದನ್ನೂ ಓದಿ: ಲಾಕ್‍ಡೌನ್ ಬಳಿಕ ತೆರೆದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ- ಸಾವಿನ ಸಂಖ್ಯೆ 8ಕ್ಕೆ ಏರಿಕೆ
Advertisement
Andhra Pradesh: Visakhapatnam District Collector Vinay Chand visited King George Hospital where people affected by #VizagGasLeak are being treated. pic.twitter.com/tEZLriS82b
— ANI (@ANI) May 7, 2020
Advertisement
ಮೈಯೆಲ್ಲಾ ನವೆಯಾಗುತ್ತದೆ. ಕಣ್ಣಲ್ಲಿ ನೀರು ಬರಲು ಶುರುವಾಯ್ತು. ಎಷ್ಟೂ ದೂರ ಓಡಿದರೂ ಗಾಳಿ ಜೋರಾಗಿ ಬರುತ್ತಿತ್ತು. ರಸ್ತೆಯಲ್ಲಿ ಎಲ್ಲೆಂದರಲ್ಲಿ ಜನರು ಬೀಳುತ್ತಿದ್ದಾರೆ. ನಮ್ಮ ಮನೆಯವರನ್ನು 3-4 ಕಿ.ಮೀ ದೂರ ಮನೆಗಳಿಗೆ ಬಿಟ್ಟು ಬಂದಿದ್ದೇವೆ. ಅನೇಕರು ಅಂಬುಲೆನ್ಸ್ ಗಾಗಿ ರಸ್ತೆಯಲ್ಲಿ ಕುಳಿತು ಕಾಯುತ್ತಿದ್ದಾರೆ. ಇಷ್ಟಾದರೂ ಗ್ಯಾಸ್ ಕಂಪನಿ ಸಿಬ್ಬಂದಿ ಕಾರುಗಳಿದ್ದರೂ ಸಹಾಯಕ್ಕೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಇಂತಹ ಗ್ರಾಮಗಳಿರುವ ನಡುವೆ ಈ ಕಂಪನಿ ಇರುವುದು ಮುಖ್ಯನಾ?. ಹೀಗಾಗಿ ಈಗಲಾದರೂ ಈ ಕಾರ್ಖಾನೆಯನ್ನು ಮುಚ್ಚಿಸಿ ಎಂದು ಮನವಿ ಮಾಡಿಕೊಂಡರು.
Advertisement
#VizagGasLeak Preventive measures pic.twitter.com/oFm2FrGvbt
— Andhra Pradesh Police (@APPOLICE100) May 7, 2020
ಇಂದು ಮುಂಜಾನೆ ಜಿಲ್ಲೆಯ ಆರ್.ಆರ್.ವೆಂಕಟಪುರಂನ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿದೆ. ಇದುವರೆಗೂ ವಿಷಾನಿಲ ದುರಂತದಿಂದ 11 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಯಾಗುವ ಸಾಧ್ಯತೆ ಇದೆ. ಇನ್ನೂ 1000ಕ್ಕೂ ಹೆಚ್ಚಿನ ಮಂದಿ ಅಸ್ವಸ್ಥರಾಗಿದ್ದಾರೆ.
ವಿಷಾನಿಲ ದುರಂತದಿಂದ ಪ್ರಾಣಿ-ಪಕ್ಷಿಗಳು ಕೂಡ ಎಲ್ಲೆಂದರಲ್ಲಿ ಮೃತಪಟ್ಟಿವೆ. ಇನ್ನೂ ಬೈಕಿನಲ್ಲಿ ಹೋಗುತ್ತಿದ್ದವರು ಅಸ್ವಸ್ಥರಾಗಿ ರಸ್ತೆಯಲ್ಲಿಯೇ ಬಿದ್ದಿದ್ದಾರೆ. ಕೆಲವರು ಮನೆಯ ಬಳಿ, ಚರಂಡಿಯೊಳಗೂ ಬಿದ್ದಿದ್ದಾರೆ. ಸದ್ಯಕ್ಕೆ ಕಾರ್ಖಾನೆ ಬಳಿ ಅಂಬುನೆಲ್ಸ್, ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ ಮತ್ತು ಪೊಲೀಸರು ಜನರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ.
Commom man from vizag explains about the incident#VizagGasLeak #Visakhapatnam pic.twitter.com/MAa3AKt44K
— D P V E U (@DPVEU_) May 7, 2020