ತುಮಕೂರು: ಸರಿಯಾಗಿ ನಿರ್ವಹಣೆ ಮಾಡದ ಶುದ್ಧ ನೀರಿನ ಘಟಕವನ್ನು ವಶಪಡಿಸಿಕೊಳ್ಳಲು ಮುಂದಾದಾಗ ಅಡ್ಡಿಪಡಿಸಿದ ಮಾಜಿ ಉಪಮೇಯರ್ ಮಗನಿಗೆ ತುಮಕೂರು ಪಾಲಿಕೆ ಆಯುಕ್ತರು ಸರಿಯಾಗಿಯೇ ಚಳಿ ಬಿಡಿಸಿದ್ದಾರೆ.
ಮಾಜಿ ಮೇಯರ್ ಫರ್ಜಾನ್ ಖಾನ್ ಪುತ್ರ ವಸೀಂ ಖಾನ್ ಶೇರಾನಿಗೆ ಆಯುಕ್ತ ಭೂಬಾಲನ್ ಸಖತಾಗಿ ಬಿಸಿ ಮುಟ್ಟಿಸಿದ್ದಾರೆ. ಶುದ್ಧ ನೀರಿನ ಘಟಕಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂರು ಬಂದಿತ್ತು. ಹೀಗಾಗಿ ವಿದ್ಯುತ್ ಬಿಲ್ ಸರಿಯಾಗಿ ಪಾವತಿಸದ ಜೊತೆಗೆ ನೀರಿನ ಘಟಕಗಳನ್ನ ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಹಲವು ನೀರಿನ ಘಟಕಗಳನ್ನ ವಶಕ್ಕೆ ಪಡೆದು ಪಾಲಿಕೆ ಮೀಟರ್ ಅಳವಡಿಸಲು ಮುಂದಾಗಿತ್ತು.
Advertisement
Advertisement
24ನೇ ವಾರ್ಡ್ ನ ಶುದ್ಧ ನೀರಿನ ಘಟಕ ಉಸ್ತುವಾರಿಯನ್ನು ವಸೀಂ ಖಾನ್ ಶೇರಾನಿ ವಹಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಮಾಜಿ ಉಪಮೇಯರ್ ಪುತ್ರ ಎಂಬ ಪ್ರಭಾವ ಬಳಸಲು ಮುಂದಾಗಿದ್ದಾರೆ. ಆಗ ಸಿಡಿಮಿಡಿಗೊಂಡ ಆಯುಕ್ತ ಭೂಬಾಲನ್ ವಸೀಂ ಖಾನ್‍ನಿಗೆ ನೀನು ಮಾಜಿ ಉಪಮೇಯರ್ ಮಗನಾದರೆ ನಿನಗೆ ಎರಡು ಕೊಂಬು ಇದೆಯಾ ಎಂದು ಪ್ರಶ್ನಿಸಿ ಅವರ ಚಳಿ ಬಿಡಿಸಿದ್ದಾರೆ.
Advertisement
ಪೊಲೀಸರ ಭದ್ರತೆ ಪಡೆದು ಒಟ್ಟು 21 ಶುದ್ಧ ನೀರಿನ ಘಟಕಗಳನ್ನು ಆಯುಕ್ತರು ವಶಪಡಿಸಿಕೊಂಡಿದ್ದು, ಬಳಿಕ ಮೀಟರ್ ಅಳವಡಿಸಲಾಗಿದೆ.