Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್‌ ಕ್ರಿಯೇಟ್‌ ಮಾಡಿದ್ದಾಳೆ, ಆಕೆ ವಿರುದ್ಧ 9 ಕೇಸ್‌ ಇದೆ: ಹು-ಧಾ ಆಯುಕ್ತ ಶಶಿಕುಮಾರ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್‌ ಕ್ರಿಯೇಟ್‌ ಮಾಡಿದ್ದಾಳೆ, ಆಕೆ ವಿರುದ್ಧ 9 ಕೇಸ್‌ ಇದೆ: ಹು-ಧಾ ಆಯುಕ್ತ ಶಶಿಕುಮಾರ್‌

Crime

ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್‌ ಕ್ರಿಯೇಟ್‌ ಮಾಡಿದ್ದಾಳೆ, ಆಕೆ ವಿರುದ್ಧ 9 ಕೇಸ್‌ ಇದೆ: ಹು-ಧಾ ಆಯುಕ್ತ ಶಶಿಕುಮಾರ್‌

Public TV
Last updated: January 7, 2026 11:22 am
Public TV
Share
2 Min Read
commissioner shashi kumar
SHARE

– ಹಿಂದಿನ ಕೇಸ್‌ಗಳಲ್ಲೂ ಮಹಿಳೆಯದ್ದು ಇದೇ ಕತೆ

ಹುಬ್ಬಳ್ಳಿ: ಪೊಲೀಸರು ಮಹಿಳೆಯನ್ನ (Women) ವಶಕ್ಕೆ ಪಡೆದಾಗ ಆಕೆ ವಿವಸ್ತ್ರಳಾಗಿರಲಿಲ್ಲ. ವ್ಯಾನ್‌ ಹತ್ತಿದ ಮೇಲೆ ತಾನೇ ಬಟ್ಟೆ ಬಿಚ್ಚಿ ಸೀನ್‌ ಕ್ರಿಯೇಟ್‌ ಮಾಡಿದ್ದಾಳೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಶಶಿಕುಮಾರ್‌ (Commissioner Shashi Kumar) ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತೆಯ (BJP Women Worker) ಬಟ್ಟೆ ಬಿಚ್ಚಿ ಥಳಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್‌ ಆದ ಬೇನ್ನಲ್ಲೇ ಪೊಲೀಸ್‌ ಆಯುಕ್ತರು ಪ್ರಕರಣ ಸಂಪೂರ್ಣ ವಿವರಣೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ವರ್ಷದಲ್ಲಿ ಹೊರತುಪಡಿಸಿ 2020 ರಿಂದ ಬಂಧಿತ ಮಹಿಳೆ ಮೇಲೆ 5 ಪ್ರಕರಣ ದಾಖಲಾಗಿದ್ದವು. ಅದರಲ್ಲಿ ಧಾರವಾಡ ವಿದ್ಯಾಗಿರಿಯಲ್ಲಿ ಒಂದು ಮತ್ತು ಇದೇ ಕೇಶ್ವಾಪುರ ಠಾಣೆಯಲ್ಲಿ 4 ಕೇಸ್‌ ದಾಖಲಾಗಿದ್ದವು. ಈ ವರ್ಷ 4 ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದ್ದಾರೆ.

BJP Worker

ಈ ಹಿಂದಿನ ಪ್ರಕರಣಗಳಲ್ಲಿ ಮಹಿಳೆಯ ನಡವಳಿಕೆಗಳ ಬಗ್ಗೆ ಮಾಹಿತಿದ್ದ ಕೇಶ್ವಾಪುರ ಪೊಲೀಸರು ಮಹಿಳೆಯನ್ನ ಬಂಧಿಸಲು ಹೆಚ್ಚುವರಿ ಮಹಿಳಾ ಸಿಬ್ಬಂದಿ ಕರೆಸಿಕೊಂಡಿದ್ದಾರೆ. ಪೊಲೀಸರು ವಶಕ್ಕೆ ಪಡೆದು ಬಂಧಿಸುವಾಗ ಆಕೆ ಬೆತ್ತಲೆ ಆಗಿರಲಿಲ್ಲ, ವ್ಯಾನ್‌ ಹತ್ತಿದ ಬಳಿಕ ಬಟ್ಟೆ ಆಕೆಯೇ ಬಿಚ್ಚಿದ್ದಾಳೆ. ಮಹಿಳೆ ಹಾಗೂ ಪುರುಷ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

ಮತಪಟ್ಟಿ ಪರಿಷ್ಕರಣೆಗೆ ಹೋದಾಗ ಸ್ಥಳೀಯರ ನಡುವೆ ನಡೆದ ಸಂಘರ್ಷ ದ್ವೇಷದ ರೂಪಕ್ಕೆ ಬದಲಾಗಿದೆ, ಗಲಾಟೆಯೂ ನಡೆದಿದೆ. ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ನಂತರ ದೂರು ದಾಖಲಾಗುತ್ತಾ ಹೋಗಿವೆ. ಇದೇ ವೇಳೆ ಸ್ಥಳೀಯರಾದ ಪ್ರಶಾಂತ್‌ ಬೊಬ್ಬಾಜಿ ಅವರು ನೀಡಿದ ದೂರು ಆಧರಿಸಿ ಕೇಸ್‌ನ ಪ್ರಮುಖ ಆರೋಪಿಯಾಗಿದ್ದ ಮಹಿಳೆಯನ್ನ ಬಂಧಿಸಲಾಗಿದೆ. ಮಹಿಳೆಯೊಬ್ಬರಿಗೆ ಕತ್ತು ಹಿಸುಕಲು ಹೋಗಿದ್ದು, ಖಾಸಗಿ ಅಂಗಕ್ಕೆ ಹೊಡೆದಿದ್ದು, ಸಾಕ್ಷ್ಯ ಸಿಕ್ಕದ ಮೇಲೆ ಅರೆಸ್ಟ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

BJP Worker 2

ಮಹಿಳೆಯನ್ನ ವ್ಯಾನ್‌ ಒಳಗೆ ಹತ್ತಿಸುತ್ತಿದ್ದಂತೆ ಆಕೆಯೇ ಖುದ್ದಾಗಿ ಬಟ್ಟೆಯನ್ನ ಬಿಚ್ಚಿದ್ದಾಳೆ. ಅಲ್ಲದೇ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಕಲಾವತಿ ಚಂದಾವರ್ಕರ್‌, ಶಕುಂತಲಾ, ರೇಖಾ ಮತ್ತು ಮಾರ್ಗರೇಟ್‌ ಅನ್ನುವವರಿಗೆ ಕಚ್ಚಿ ಘಾಸಿಗೊಳಿಸಿದ್ದಾಳೆ. ಓರ್ವ ಸಿಬ್ಬಂದಿಗೆ ಹೊಟ್ಟೆ ಭಾಗಕ್ಕೆ ರಕ್ತ ಬರುವಂತೆ ಕಚ್ಚಿದ್ದಾಳೆ. ಆದ್ರೆ ಈ ವಿಡಿಯೋ ಯಾರ್‌ ಮಾಡಿದ್ದಾರೆ ಗೊತ್ತಿಲ್ಲ. ವಿಡಿಯೋ ಮಾಡಿ ವೈರಲ್‌ ಮಾಡಿದವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಪೊಲೀಸರು ಮಾಡಿದ್ದರೆ, ಅರೆಸ್ಟ್‌ ಆದ ಮೇಲೆ ಮೆಡಿಕಲ್‌ ಮಾಡಿಸ್ತೀವಿ, ಆಗಲಾದ್ರೂ ವೈದ್ಯರ ಬಳಿ ಹೇಳೋಕೆ ಅವಕಾಶ ಇತ್ತು. ನಂತರ ಮ್ಯಾಜಿಸ್ಟ್ರೇಟ್‌ ಬಳಿಯೂ ಹೇಳಿಲ್ಲ. ಆಕೆ ಬಟ್ಟೆ ಬಿಚ್ಚಿದ್ದಾಗ ಪೊಲೀಸರೇ ಸ್ಥಳೀಯರ ಸಹಾಯದಿಂದ ಬೇರೆ ಬಟ್ಟೆ ಹಾಕಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?
ಘಟನೆಗೆ ಹಳೇ ವೈಷಮ್ಯ ಕಾರಣ ಅಂತ ಹೇಳಲಾಗ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಬೂತ್‌ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ ನಮ್ಮ ವೋಟ್‌ ಡಿಲೀಟ್‌ ಮಾಡಿಸಿದ್ದಾರೆ ಅಂತ ಗಲಾಟೆ ಮಾಡಿದ್ದರು. ಹಾಗಾಗಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇತ್ತು. ಇದೇ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರಂತೆ. ಇದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿತ್ತು. ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್‌ ಸೆಕ್ಷನ್‌ 307 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.

TAGGED:accusedbjpBJP workercongresshubballiHubballi Policeಕಾಂಗ್ರೆಸ್ಬಿಜೆಪಿಮತಪಟ್ಟಿ ಪರಿಷ್ಕರಣೆಹುಬ್ಬಳ್ಳಿಹುಬ್ಬಳ್ಳಿ ಪೊಲೀಸ್
Share This Article
Facebook Whatsapp Whatsapp Telegram

Cinema news

Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post

You Might Also Like

Mantralaya
Districts

ಅದ್ದೂರಿಯಾಗಿ ನಡೆದ ಗುರುರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ

Public TV
By Public TV
7 minutes ago
karwar accident
Latest

ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸರಣಿ ಅಪಘಾತ – ವಿದೇಶಿ ಪ್ರಜೆಗಳು ಸೇರಿ 24 ಜನರಿಗೆ ಗಾಯ

Public TV
By Public TV
27 minutes ago
Valmiki Prasannananda Puri Swamiji heart attack
Karnataka

ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತ – ಆಸ್ಪತ್ರೆಗೆ ದಾಖಲು

Public TV
By Public TV
1 hour ago
Hanuman Statue Texas
Latest

ಅತಿಕ್ರಮಣ ನಿಲ್ಲಿಸಿ: ಅಮೆರಿಕದ ಟೆಕ್ಸಾಸ್‌ನಲ್ಲಿ ಹನುಮನ ಪ್ರತಿಮೆ ಪ್ರತಿಷ್ಠಾಪನೆಗೆ MAGA ನಾಯಕ ವಿರೋಧ

Public TV
By Public TV
2 hours ago
Bandipur Tiger Reserve
Chamarajanagar

ನಾಗರಹೊಳೆ, ಬಂಡೀಪುರದಲ್ಲಿ ಸಫಾರಿಗೆ ಸರ್ಕಾರ ಅಸ್ತು – ಹೋರಾಟದ ಎಚ್ಚರಿಕೆ ಕೊಟ್ಟ ರೈತರು

Public TV
By Public TV
3 hours ago
Hyderabad Murder
Crime

ಟೆಕ್ಕಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಇರಿದು ಕೊಂದ ವ್ಯಕ್ತಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?