ಬೆಂಗಳೂರು: ಕರ್ನಾಟಕದಲ್ಲೀಗ ಕಮಿಷನ್ ಕದನ (Commission Fight) ಜೋರಾಗ್ತಿದೆ. ಬಿಜೆಪಿ ಶಾಸಕನ ಪತ್ರವೇ ಕಾಂಗ್ರೆಸ್‍ಗೆ ಬ್ರಹ್ಮಾಸ್ತ್ರವಾಗಿದೆ. ಕಾಂಗ್ರೆಸ್ ನಾಯಕರು ಮತ್ತೆ ಸಿಎಂ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಕೂಡ ದಾಖಲೆ ಕೊಡಿ ಅಂತಾ ಎದಿರೇಟು ಪ್ರದರ್ಶಿಸುತ್ತಿದೆ. ಕಾಂಗ್ರೆಸ್ (Congress) ಹೊಸ ಪೊಲಿಟಿಕಲ್ ಚಾರ್ಜ್ ಶೀಟ್ (ChargeSheet) ಅಸಲಿಯತ್ತೇನು..? ಎಂಬ ಚರ್ಚೆಯಾಗ್ತಿದೆ.
Advertisement
ಅಂದಹಾಗೆ ಬಿಜೆಪಿ (BJP) ವರ್ಸಸ್ ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗಿದೆ. ಸಿಎಂ ಮತ್ತು ಸಚಿವರ ಮೇಲೆ ಕಾಂಗ್ರೆಸ್ ನಾಯಕರು ತರಾತುರಿ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ (Gulihatti D Shekar) ನೀರಾವರಿ ಇಲಾಖೆಗೆ ಬರೆದ ಪತ್ರವನ್ನು ಮುಂದಿಟ್ಟು ಪೊಲಿಟಿಕಲ್ ಚಾರ್ಜ್ ಶೀಟ್ ಹಾಕಿದ್ದಾರೆ. ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಇಂದು ಕಾಂಗ್ರೆಸ್ ನಾಯಕರಾದ ಸುರ್ಜೇವಾಲಾ (Randeep Surjewala), ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar) ತುರ್ತು ಸುದ್ದಿಗೋಷ್ಟಿ ನಡೆಸಿ ಎರಡು ಗಂಭೀರ ಆರೋಪಗಳನ್ನ ಮಾಡಿದ್ದಾರೆ. ನೀರಾವರಿ ಇಲಾಖೆಯ ವಿವಿಧ ನಿಗಮಗಳಲ್ಲಿ 18 ಸಾವಿರ ಕೋಟಿ ಕಾಮಗಾರಿಗಳ ಟೆಂಡರ್ ಅಕ್ರಮ ಮತ್ತು ಪೆಂಡಿಂಗ್ ಬಿಲ್ ಕ್ಲಿಯರೆನ್ಸ್ ಗೆ ಸಿಎಂ ಕಚೇರಿಯಿಂದ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಅಂತಾ ಸಿದ್ದರಾಮಯ್ಯ, ಡಿಕೆಶಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಅಧಿಕಾರಿಗಳು, ಗುತ್ತಿಗೆದಾರರಿಗೂ ವಾರ್ನ್ ಮಾಡಿರುವ ಕಾಂಗ್ರೆಸ್ ನಾಯಕರು, ನಮ್ಮ ಸರ್ಕಾರ ಬರುತ್ತೆ ವಿಚಾರಣಾ ಸಮಿತಿ ರಚನೆ ಮಾಡಿ ತನಿಖೆ ಮಾಡಿಸ್ತೀವಿ, ಎಲ್ಲರಿಗೂ ಕಾದಿದೆ ಮುಂದೆ ಎಂಬ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
* ಕಾಂಗ್ರೆಸ್ ಪೊಲಿಟಿಕಲ್ ಚಾರ್ಚ್ ಶೀಟ್.!?
> ನೀರಾವರಿ ಇಲಾಖೆಗಳ ವಿವಿಧ ನಿಗಮಗಳಿಂದ ಟೆಂಡರ್
> ಒಂದೇ ದಿನ 18 ಸಾವಿರ ಕೋಟಿ ಮೌಲ್ಯದ ಕಾಮಗಾರಿಗಳಿಗೆ ಟೆಂಡರ್
> ಕೆಲ ಶಾಸಕರಿಗೆ 2-3 ಸಾವಿರ ಕೋಟಿ ಹಂಚಿ ಟೆಂಡರ್ ಗೆ ಗುತ್ತಿಗೆದಾರರನ್ನ ಹಿಡಿದುಕೊಡಬೇಕು, ಕಮಿಷನ್ ಹಣ ಪಡೆಯಿರಿ ಎಂಬ ಸೂಚನೆ ಆರೋಪ
> ಟೆಂಡರ್ ಪ್ರಕ್ರಿಯೆಗೆ 7 ದಿನಗಳ ಕಾಲಾವಕಾಶ ನೀಡಿರುವುದು
> ಟೆಂಡರ್ ಮೊತ್ತವನ್ನ 500 ಕೋಟಿಯಿಂದ 1000 ಕೋಟಿಗೆ ಹೆಚ್ಚಳ
> 20 ಸಾವಿರ ಕೋಟಿ ಪೆಂಡಿಂಗ್ ಬಿಲ್ಸ್ ಕ್ಲಿಯರೆನ್ಸ್ ಕಮಿಷನ್
> ಸಿಎಂ ಕಚೇರಿಯಲ್ಲಿ ದಂಧೆ, ಜಾಸ್ತಿ ಕಮಿಷನ್ ಕೊಟ್ಟರೆ ಬಿಲ್ ಕ್ಲಿಯರ್ ಆಗುತ್ತೆ
Advertisement
ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಿದೆ. ಕಾಂಗ್ರೆಸ್ ತನ್ನ ಆರೋಪಗಳಿಗೆ ದಾಖಲೆ ಕೊಡಲಿ. ಗೂಳಿಹಟ್ಟಿ ಶೇಖರ್ ಅವರಿಗೂ ದಾಖಲೆ ಕೊಡಲು ಹೇಳಿದ್ದೇವೆ. ಲೋಕಾಯುಕ್ತದಲ್ಲಿ ಇರುವ ಅವರ ಕೇಸ್ ಗಳಿಗೆ ಉತ್ತರಿಸಲಿ, ಅವರು ಜೈಲಿಗೆ ಹೋಗುವುದನ್ನ ತಪ್ಪಿಸಿಕೊಳ್ಳಲಿ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಯಡಿಯೂರಪ್ಪ ಕೂಡ ಕಿಡಿಕಾರಿದ್ದು, ಕಾಂಗ್ರೆಸ್‍ನವರಿಗೆ ತಲೆ ಕೆಟ್ಟಿದೆ. ತಲೆ ಸರಿ ಇರೋರು ಈಥರ ಮಾತಾಡಲ್ಲ. ಕಾಂಗ್ರೆಸ್ ಆರೋಪ ನಿರಾಧಾರ ಅಂತಾ ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ ಎರಡು ತಿಂಗಳಷ್ಟೇ ಬಾಕಿಯಿದ್ದು ಕಾಂಗ್ರೆಸ್, ಬಿಜೆಪಿ ಕೆಸರೆರಚಾಟ ಮುಂದುವರಿದಿದ್ದು, ದಾಖಲೆ ಇದೆ ಅಂತಾ ಕಾಂಗ್ರೆಸ್, ದಾಖಲೆ ಕೊಡಿ ಅಂತಾ ಬಿಜೆಪಿ ಕಿತ್ತಾಡುತ್ತಿದ್ದು, ಯಾರ ಗ್ರಹಚಾರವನ್ನ ಯಾರು ಬಿಡಿಸ್ತಾರೆ..? ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k