ಚಾಮರಾಜನಗರ: ಬಿಜೆಪಿ (BJP) ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ (Congress) ಈಗ ಆ ಪಕ್ಷದ ಶಾಸಕರ ವಿರುದ್ಧವೇ ಗಂಭೀರ ಆರೋಪ ಬಂದಿದೆ. ಗುತ್ತಿಗೆ ನೀಡುವಾಗ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ (Puttaranga Shetty) ಹಸ್ತಕ್ಷೇಪ ಮಾಡಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಎಸ್ಸಿ- ಎಸ್ಟಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಮಂಜುನಾಥ್ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಶೇ.25ರಷ್ಟು ಮೀಸಲಾತಿ ನೀಡಬೇಕು. ಆದರೆ ಸ್ಥಳೀಯ ಶಾಸಕರಾದ ಪುಟ್ಟರಂಗ ಶೆಟ್ಟಿ ಅವರು ಗುತ್ತಿಗೆ ನೀಡುವಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ಲೈಸೆನ್ಸ್ ಇಲ್ಲದವರಿಗೆ ಕಾಮಗಾರಿ ನೀಡುತ್ತಿದ್ದಾರೆ. ಇದರಿಂದಾಗಿ ನಮಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ.
ಕಮಿಷನ್ ದಂಧೆ ನಡೆಯುತ್ತಿರುವುದು ನಿಜ. ಶಾಸಕರು ಅವರ ಸ್ವಾರ್ಥಕ್ಕೆ ತಮಗೆ ಬೇಕಾದವರಿಗೆ ಮಾತ್ರ ಕೆಲಸ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 40% ಕಮಿಷನ್ ಎಲ್ಲ ಜನಪ್ರತಿನಿಧಿಗಳು ಮಾಡುತ್ತಿರುವುದು ಆಧಾರ ರಹಿತ ಕಟು ಸತ್ಯವಾಗಿದೆ ಎಂದರು. ಇದನ್ನೂ ಓದಿ: ಟ್ವಿಟ್ಟರ್ ಖಾತೆ ಬ್ಲಾಕ್ ಆದೇಶ ರದ್ದು – ಕೆಜಿಎಫ್ ಹಾಡು ಬಳಸಿದ್ದ ಕಾಂಗ್ರೆಸ್‌ಗೆ ಬಿಗ್ ರಿಲೀಫ್
ಎಲ್ಲ ಜನಪ್ರತಿನಿಧಿಗಳು ಕಮಿಷನ್ ಆಸೆಗಾಗಿ ಗುತ್ತಿಗೆ ಕಾಮಗಾರಿಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ತಮಗೆ ಬೇಕಾದ ಒಬ್ಬರಿಗೆ ಕೆಲಸ ಕೊಡುತ್ತಿದ್ದಾರೆ. ಅದೇ ರೀತಿ ಶಾಸಕ ಪುಟ್ಟರಂಗ ಶೆಟ್ಟಿ ಅವರು, ಎಸ್ಸಿ- ಎಸ್ಟಿ ಅವರಿಗೆ ಕೆಲಸ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಒಬ್ಬ ಗುತ್ತಿಗೆದಾರನಿಗೆ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿ- 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ