ಬೆಂಗಳೂರು: ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ವ್ಯಾಪಾರ ಮಾಡ್ತಿರೋ ಅಂಗಡಿಗಳ ಕಳೆದ 4 ವರ್ಷದ ವಹಿವಾಟನ್ನ ಗಮಿನಿಸಿರೋ ವಾಣಿಜ್ಯ ತೆರಿಗೆ ಇಲಾಖೆಯು, ಜಿಎಸ್‌ಟಿ ಟ್ಯಾಕ್ಸ್ (GST Tax) ಕಟ್ಟಬೇಕು ಎಂದು ಸಾವಿರಾರು ಮಾಲೀಕರಿಗೆ ನೋಟಿಸ್ ನೀಡುವ ಮೂಲಕ ಬಿಗ್ ಶಾಕ್ ನೀಡಿದೆ.
ದೂರದೂರುಗಳಿಂದ ಅಪ್ಪ ಅಮ್ಮನನ್ನ ಬಿಟ್ಟು ನಗರಗಳಿಗೆ ಹೋಗಿ ಹೇಗಾದ್ರೂ ಒಂದು ಬಿಸಿನೆಸ್ ಮಾಡಿ ಕುಟುಂಬದವರನ್ನ ನೋಡಿಕೊಳ್ಳೋಣ ಅನ್ನೋ ಸಣ್ಣ ಆಸೆಯಿಂದ ಸಾವಿರಾರು ಜನ ಇಂದು ಬೇಕರಿ (Bakery), ಟೀ ಶಾಪ್, ಪಾನ್ ಶಾಪ್, ಕಾಂಡಿಮೆಂಟ್ ಅಂತಾ ಮಾಡಿಕೊಂಡು ಜೀವನ ಮಾಡ್ತಿದ್ದಾರೆ. ಇತಂಹ ಶಾಪ್‌ಗಳಲ್ಲಿ ಇವತ್ತಿನ ಡಿಜಿಟಲ್ ದುನಿಯಾದಲ್ಲಿ ಅತಿಹೆಚ್ಚು ವ್ಯವಹಾರ ಆಗ್ತಿರೋದು ಆನ್‌ಲೈನ್ ಪೇಮೆಂಟ್ ಅಂದರೆ ಗೂಗಲ್‌ಪೇ, ಪೆಟಿಎಂ, ಪೋನ್ ಪೇ ಮೂಲಕವೇ ಟೀ, ಸಿಗರೇಟ್, ಕಾಫಿ, ತಿಂಡಿ, ಬೀಡಾ ಅಂತಾ ಗ್ರಾಹಕರು ಸಣ್ಣ ಪುಟ್ಟ ಖರೀದಿಗೂ ಡಿಜಿಟಲ್ ಪೇಮೆಂಟ್ ಮಾಡ್ತಿದ್ದಾರೆ. ಇದನ್ನೂ ಓದಿ: ಯಶ್ ತಾಯಿ ನಿರ್ಮಾಣದ ʻಕೊತ್ತಲವಾಡಿʼ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್
ಹೀಗೆ ವ್ಯಾಪಾರ ಮಾಡ್ತಿರೋ ಅಂಗಡಿಗಳ ಕಳೆದ ನಾಲ್ಕು ವರ್ಷದ ವಹಿವಾಟನ್ನು ಗಮಿನಿಸಿರೋ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ನಿಮ್ಮ ವ್ಯಾಪಾರ ವಹಿವಾಟು ಲಕ್ಷದಿಂದ ಕೋಟಿವರೆಗೆ ಆಗಿದೆ. ಅದಕ್ಕೆ ಜಿಎಸ್‌ಟಿ ಟ್ಯಾಕ್ಸ್ ಕಟ್ಟಬೇಕು ಅಂತಾ ಸಾವಿರಾರು ಮಾಲೀಕರಿಗೆ ನೋಟಿಸ್ ನೀಡಿದೆ. ಹೀಗೆ ನೋಟಿಸ್ ಪಡೆದವರು ಅಯ್ಯೋ ನಾವು ವರ್ಷ ಪೂರ್ತಿ ದುಡಿದರೂ 2-3 ಲಕ್ಷ ರೂ. ಉಳಿತಾಯ ಆಗೋಲ್ಲ. ಈಗ ಇಷ್ಟೊಂದು ಟ್ಯಾಕ್ಸ್ ಎಲ್ಲಿಂದ ಕಟ್ಟೋದು ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಗೃಹಮಂಡಳಿಯಿಂದ ಲಾಟರಿ – ಅಗ್ಗದ ದರದಲ್ಲಿ ಡ್ಯುಪ್ಲೆಕ್ಸ್ ಮನೆ: ಬೆಲೆ ಎಷ್ಟು ಗೊತ್ತಾ?
ಈ ನೋಟಿಸ್ ಪಡೆದವರೆಲ್ಲ, ಕಾರ್ಮಿಕ ಪರಿಷತ್ತಿ ಸಂಘದ ಅಧ್ಯಕ್ಷ ರವಿ ಶೆಟ್ಟಿ ಅವರ ಬಳಿ ಹೋಗಿ ತಮಗೆ ನೋಟಿಸ್ ಬಂದಿರೋ ಬಗ್ಗೆ ಹೇಳಿಕೊಂಡಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆ ನೀಡಿ, ಈಗ ಈ ರೀತಿ ವಸೂಲಿಗೆ ನಿಂತಿದೆ. ಇದು ಸರಿಯಾದ ಕ್ರಮವಲ್ಲ. ಇಡೀ ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಸಣ್ಣ ಬೇಕರಿ, ಕಾಂಡಿಮೆಂಟ್ಸ್ ಇದೆ. ಅವರೆಲ್ಲ ನಮ್ಮನ್ನ ಸಂಪರ್ಕ ಮಾಡ್ತಿದ್ದಾರೆ. ಸರ್ಕಾರ ಈ ಟ್ಯಾಕ್ಸ್ ಹಿಂಪಡೆಯಬೇಕು ಎಂದು ನಾವು ಸಿಎಂಗೆ ಮನವಿ ಮಾಡುತ್ತೇವೆ. ಇಲ್ಲವಾದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸೇರಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್ – EV ಕಾರಿನ ಬೆಲೆ ಎಷ್ಟು?
ಒಟ್ಟಿನಲ್ಲಿ, ವಾಣಿಜ್ಯ ತೆರಿಗೆ ನೋಟಿಸ್ ಸಾವಿರಾರು ಜನರ ನಿದ್ದೆಗೆಡಿಸಿದೆ. ನಾವು ಇಡೀ ಜೀವಮಾನದಲ್ಲಿ ಸಂಪಾದನೆ ಮಾಡದಷ್ಟು ಹಣವನ್ನ ಟ್ಯಾಕ್ಸ್ ಮೂಲಕ ಕಟ್ಟಿ ಅಂತಿದ್ದಾರೆ. ಅದು ಹೇಗೆ ಸಾಧ್ಯ, ನಮ್ಮ ಜೀವನ ಬೀದಿಗೆ ತರೋದಕ್ಕೆ ಸರ್ಕಾರ ಮುಂದಾಗಿದೆ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಸರ್ಕಾರ ಈಗ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.