ನವದೆಹಲಿ: ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ (Commercial LPG Cylinders) ಬೆಲೆ ಪರಿಷ್ಕರಿಸಿದ ನಂತರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ ಕಂಡಿದೆ.
19kg Non-Domestic cylinder price reduced by Rs 83.50 from today. Delhi retail sale price of 19kg Non-Domestic cylinder price is Rs 1773.
No change in Domestic cylinder price.
(Representative image) pic.twitter.com/uZYv5WEhzS
— ANI (@ANI) June 1, 2023
19 ಕೆಜಿ ತೂಕದ ಸಿಲಿಂಡರ್ ಬೆಲೆ 83.50 ರೂ. ಇಳಿಕೆಯಾಗಿದ್ದು, ದೆಹಲಿಯಲ್ಲಿ 1,773 ರೂ.ಗೆ ಮಾರಾಟವಾಗುತ್ತಿದೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ
ಕಳೆದ ತಿಂಗಳು ಮೇ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 171.50 ರೂ. ಕಡಿತಗೊಳಿಸಲಾಗಿತ್ತು. ಅದಕ್ಕೂ ಮುನ್ನ ಏಪ್ರಿಲ್‌ನಲ್ಲಿ 91.50 ರೂ. ಕಡಿತಗೊಳಿಸಲಾಗಿತ್ತು. ಆದರೆ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ದರ ಕಳೆದ ತಿಂಗಳಿನಂತೆಯೇ ಇದೆ. ಇದನ್ನೂ ಓದಿ: 100 ಯೂನಿಟ್ ವಿದ್ಯುತ್ ಫ್ರೀ – ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಘೋಷಣೆ
ಸದ್ಯ ವಾಣಿಜ್ಯ ಸಿಲಿಂಡರ್ ಬೆಲೆ ಕೋಲ್ಕತ್ತಾದಲ್ಲಿ 1,875.50 ರೂ., ಮುಂಬೈನಲ್ಲಿ 1,725 ರೂ., ಚೆನ್ನೈನಲ್ಲಿ 1,937ರೂ. ಗಳಿಗೆ ಮಾರಾಟವಾಗುತ್ತಿದೆ.