ನವದೆಹಲಿ: ದೇಶದಲ್ಲಿ ಇದೀಗ ವಾಣಿಜ್ಯ ಬಳಕೆಯ 19 ಕೆ.ಜಿಯ ಎಲ್‌ಪಿಜಿ ದರವನ್ನು 6 ರೂ. ಏರಿಕೆ ಮಾಡಲಾಗಿದೆ.
ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಎಲ್‌ಪಿಜಿ ದರ 6 ರೂ. ಏರಿಕೆಯಾಗಿದೆ. ಇದಕ್ಕೂ ಮುನ್ನ ಫೆ.1 ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 7 ರೂ.ಗೆ ಇಳಿಕೆ ಮಾಡಿದ್ದವು.ಇದನ್ನೂ ಓದಿ: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ
Advertisement
Advertisement
ದರ ಏರಿಕೆಯಾದ ಬಳಿಕ ದೆಹಲಿಯಲ್ಲಿ 1,803 ರೂ., ಮುಂಬೈನಲ್ಲಿ 1,755 ರೂ., ಕೋಲ್ಕತ್ತಾದಲ್ಲಿ 1,913 ರೂ. ಚೆನ್ನೈನಲ್ಲಿ 1,965 ರೂ.ಗೆ ಹೆಚ್ಚಳವಾಗಿದೆ.
Advertisement
ಗೃಹಬಳಕೆ ಎಲ್‌ಪಿಜಿ ಬೆಲೆ ಮೊದಲಿನಂತೆಯೇ ಉಳಿದಿದ್ದು, ದೆಹಲಿಯಲ್ಲಿ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 803 ರೂ., ಮುಂಬೈನಲ್ಲಿ 802.50 ರೂ., ಕೋಲ್ಕತ್ತಾದಲ್ಲಿ 829 ರೂ. ಮತ್ತು ಚೆನ್ನೈನಲ್ಲಿ 818.50 ರೂ. ಆಗಿದೆ.ಇದನ್ನೂ ಓದಿ: ತುಮಕೂರು| ಮದುವೆಯಾದ ಒಂದೂವರೆ ವರ್ಷಕ್ಕೆ ಗೃಹಿಣಿ ನಿಗೂಢ ಸಾವು
Advertisement