ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿರುವ ‘ರೋಲೆಕ್ಸ್ ಕೋಮಲ್’ ಚಿತ್ರತಂಡ ಇಂದು ಮುಹೂರ್ತ ಆಚರಿಸಿಕೊಂಡಿದೆ. ಸೆನ್ಸೇಶನಲ್ ಸ್ಟಾರ್ ಕೋಮಲ್, ಸೋನಾಲ್ ಮೊಂಟೆರೋ ಮುಖ್ಯ ಭೂಮಿಕೆಯ ಈ ಚಿತ್ರದ ಚಿತ್ರೀಕರಣ ನಾಳೆಯಿಂದ ಆರಂಭವಾಗಲಿದೆ. ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ ನಾಳೆಯಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಸುತ್ತಾಮುತ್ತ ಚಿತ್ರೀಕರಣ ನಡೆಯಲಿದೆ. ಕೋಮಲ್ ಸರ್ ಈ ಹಿಂದಿನ ತಮ್ಮ ಸಿನಿಮಾಗಳಿಗಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರ ವಿಭಿನ್ನವಾಗಿದೆ. ವಿಭಿನ್ನವಾಗಿ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ರಂಗಾಯಣ ರಘು, ಶೋಭರಾಜ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಟ ಕೋಮಲ್ ಮಾತನಾಡಿ ನಾಳೆಯಿಂದ ಚಿತ್ರೀಕರಣ ಆರಂಭವಾಗುತ್ತೆ. ರೋಲೆಕ್ಸ್ ಅನ್ನೋದು ಒಂದು ಬ್ರ್ಯಾಂಡ್ ಆ ಬ್ರ್ಯಾಂಡ್ ಹೇಗೆ ಕ್ರಿಯೇಟ್ ಆಗುತ್ತೆ ಅನ್ನೋದೇ ಈ ಚಿತ್ರದ ಎಳೆ. ತುಂಬಾ ಎಂಟಟೈನ್ಮೆಂಟ್ ಆಗಿದೆ ಸಿನಿಮಾ. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇದೆ. ಗರಗಸ ನಂತರ ಈ ತರದೊಂದು ಪ್ರಯೋಗ ಮಾಡುತ್ತಿದ್ದೇನೆ. ಪರ್ಫಾಮೆನ್ಸ್ ಗೆ ಸಾಕಷ್ಟು ಅವಕಾಶ ಇದೆ. ಹಾಡುಗಳು ಈಗಾಗಲೇ ರೆಕಾರ್ಡ್ ಆಗಿದೆ. ಆಲ್ಬಂ ಹಿಟ್ ಆಗೋ ಎಲ್ಲಾ ಸೂಚನೆ ಕೂಡ ಇದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು
ಸೋನಾಲ್ ಮೊಂಟೆರೋ ಮಾತನಾಡಿ ಇಡೀ ಸಿನಿಮಾದಲ್ಲಿ ನಾನು ಕೋಮಲ್ ಸರ್ ಕ್ಯಾರಿ ಆಗ್ತೀವಿ. ನಾಳೆಯಿಂದ ಚಿತ್ರೀಕರಣ ಆರಂಭವಾಗುತ್ತೆ. ನನ್ನ ಭಾಗದ ಚಿತ್ರೀಕರಣ 25ದಿನ ನಡೆಯಲಿದೆ. ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತದೆ. ಶುಗರ್ ಫ್ಯಾಕ್ಟರಿ ಬಿಡುಗಡೆಗೆ ರೆಡಿಯಾಗಿದೆ. ಮಿ. ನಟ್ವರ್ ಲಾಲ್, ಬುದ್ದಿವಂತ 2, ಗರಡಿ, ಮಹಾದೇವ, ತಲ್ವರ್ ಪೇಟೆ, ಸರೋಜಿನಿ ನಾಯ್ಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿಸಿದ್ರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k