ಬೆಂಗಳೂರು: ಇತ್ತೀಚೆಗಷ್ಟೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಮತ್ತು ದಿವ್ಯ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಕಾಮಿಡಿ ಕಿಲಾಡಿಗಳು ಅಡ್ಡಾದ ಮತ್ತೊಬ್ಬ ಕಲಾವಿದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಲಾಕ್‍ಡೌನ್ ಹಿನ್ನೆಲೆ ಸರಳವಾಗಿ ವಿವಾಹವಾಗಿದ್ದಾರೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಮಿಡಿ ಕಿಲಾಡಿಗಳು ತಂಡದ ಕೆಲ ಸಹ ನಟರು ಸಹ ವಿವಾಹದಲ್ಲಿ ಭಾಗಿಯಾಗಿದ್ದಾರೆ.
Advertisement
ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಅದ್ಧೂರಿಯಾಗಿ ಮದುವೆ ಮಾಡುವಂತಿಲ್ಲ, ಹೆಚ್ಚು ಜನರನ್ನು ಕರೆಯುವಂತಿಲ್ಲ. ಈಗಾಗಲೇ ನಿಗದಿ ಆಗಿರುವ ಕೆಲ ಮದುವೆಗಳನ್ನು ಮುಂದೂಡಲಾಗಿದ್ದು, ಇನ್ನೂ ಹಲವು ಜೋಡಿಗಳು ಸರಳವಾಗಿ ಹತ್ತು, ಇಪ್ಪತ್ತು ಜನರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಅದೇ ರೀತಿ ಇದೀಗ ಸಂತೋಷ್ ಸಹ ಮದುವೆಯಾಗಿದ್ದು, ಹೆಚ್ಚು ಜನರನ್ನು ಕರೆಯದೆ, ತಮ್ಮ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
Advertisement
Advertisement
ಏ.10 ರಂದು ಸಂತೋಷ್ ವಿವಾಹ ನಿಗದಿಯಾಗಿತ್ತು. ನಂತರ ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಸಂಭ್ರಮದ ಮದುವೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಅನುಮತಿ ಪಡೆದು ಸರಳವಾಗಿ 20 ಜನರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂತೋಷ್ ಅವರ ಸಹ ನಟ ಮಡೇನೂರು ಮನು ಸಹ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹೆಚ್ಚು ಜನ ಸೇರದಿದ್ದರೂ ಫುಲ್ ಎಂಜಾಯ್ ಮಾಡಿದ್ದಾರೆ.
Advertisement
ಈ ಕುರಿತು ಮಡೇನೂರು ಮನು ಟಿಕ್‍ಟಾಕ್‍ನಲ್ಲಿ ವಿಡಿಯೋಗಳನ್ನು ಹಾಕಿದ್ದು, ವಿವಾಹದ ಸಂದರ್ಭದಲ್ಲಿ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಕಾಮಿಡಿ ಕಿಲಾಡಿಗಳು ಸೀಸನ್ ಮೂರರ ರನ್ನರ್ ಅಪ್ ಆಗಿ ಹೊರಹೊಮ್ಮಿದ, ತುಕಾಲಿ ಸ್ಟಾರ್ ಸಂತು ಎಂದೇ ಖ್ಯಾತಿ ಪಡೆದಿದ್ದ ಸಂತೋಷ್, ಕನ್ನಡಿಗರ ಮನೆ ಮಾತಾಗಿದ್ದಾರೆ. ಸಂತೋಷ್ ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಆಗುತ್ತಾರೆ ಎಂದು ಹಲವರು ಊಹಿಸಿದ್ದರು. ಆದರೆ ಕೊನೆಗೆ ರಾಕೇಶ್ ಪೂಜಾರಿ ಟ್ರೋಫಿ ಗೆದ್ದರು. ಸಂತೋಷ್ ರನ್ನರ್ ಅಪ್ ಆದರು. ಆದರೆ ಇವರ ಜನಪ್ರಿಯತೆ ಮಾತ್ರ ಇಡೀ ಕರ್ನಾಟಕಕ್ಕೆ ಪಸರಿಸಿತು. ಹೀಗಾಗಿಯೇ ಇವರಿಗೆ ಸಿನಿಮಾ ಆಫರ್ ಗಳು ಹೆಚ್ಚು ಬರಲು ಆರಂಭಿಸಿದವು.
ಸಂತೋಷ್ ಈಗಾಗಲೇ ಕನ್ನಡದ 12 ಸಿನಿಮಾಗಳಲ್ಲಿ ನಟಿಸಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಹೆಚ್ಚು ಆಫರ್‍ಗಳು ಬರುತ್ತಿದ್ದು, ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಲಾಕ್‍ಡೌನ್ ಸಂದರ್ಭದಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂತೋಷ್ ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸಿಪುರ ತಾಲೂಕಿನ ಉದ್ದೂರು ಹೊಸಹಳ್ಳಿಯವರು. ಲಾಕ್‍ಡೌನ್ ಇರುವುದರಿಂದ ಊರಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.