ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರದಿಂದ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಹಲವು ಸ್ವಾರಸ್ಯಕರ ಚರ್ಚೆಗೂ ಸಾಕ್ಷಿಯಾಗುತ್ತಿದೆ. ಅಹೋರಾತ್ರಿ ಧರಣಿಗೆ ಇಬ್ಬರಿಗೆ ವಿನಾಯ್ತಿ ನೀಡಿದ್ದಾರಂತೆ. ಸ್ವತಃ ಸಿದ್ದರಾಮಯ್ಯ ಅವರೇ ಆ ಇಬ್ಬರ ಹೆಸರನ್ನ ಮೊಗಸಾಲೆಯಲ್ಲಿ ಹೇಳಿ ಹಾಸ್ಯ ಮಾಡಿದ್ದಾರೆ.
ಶುಕ್ರವಾರ ಕಲಾಪ ಆರಂಭಕ್ಕೂ ಮುನ್ನ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಕುಳಿತಿದ್ದರು. ಆ ಸ್ಥಳಕ್ಕೆ ಮಾಜಿ ಸಚಿವ ದೇಶಪಾಂಡೆ ಕೂಡ ಬಂದು ಸಿದ್ದರಾಮಯ್ಯ ಪಕ್ಕ ಕುಳಿತರು. ಆಗ ಸಿದ್ದರಾಮಯ್ಯ ದೇಶಪಾಂಡೆಯವರ ಕಾಲೆಳೆಯಲು ಪ್ರಾರಂಬಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಹೋರಾತ್ರಿ ಧರಣಿ – ಸಿಎಂ, ಬಿಎಸ್ವೈ ಸಂಧಾನ ಯತ್ನ ವಿಫಲ
Advertisement
Advertisement
ಅಹೋರಾತ್ರಿ ಧರಣಿಗೆ ನಮ್ ಶಾಮನೂರು ಶಿವಶಂಕರಪ್ಪ, ಈ ದೇಶಪಾಂಡೆ ಇಬ್ಬರಿಗೂ ವಿನಾಯ್ತಿ ಕೊಟ್ಟಿದ್ದೇವೆ. ಇಬ್ಬರಿಗೂ ವಯಸ್ಸಾಗಿದೆ ಪಾಪ ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.
Advertisement
ಇದಕ್ಕೆ ತಕ್ಷಣ ರಿಯಾಕ್ಟ್ ಮಾಡಿದ ದೇಶಪಾಂಡೆ. ನಾನೇನು ಮುದುಕ ಅಲ್ಲ, ನನಗೇನು ವಯಸ್ಸಾಗಿದೆ. ನಿನಗಿಂತ ನಾನು 6 ತಿಂಗಳು ದೊಡ್ಡವನು. ಹಾಗಾದ್ರೆ ನೀನು ಮುದುಕನಾ? ಎಂದು ಸಿದ್ದರಾಮಯ್ಯಗೆ ಕೇಳಿದ್ದಾರೆ. ಇದನ್ನೂ ಓದಿ: ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ 1.5 -2 ಕೋಟಿ ರೂ.ನಷ್ಟಕ್ಕೆ ಹೊಣೆ ಯಾರು? – ಬಿಜೆಪಿ, ಕಾಂಗ್ರೆಸ್ನ್ನು ತಿವಿದ ಎಚ್ಡಿಕೆ
Advertisement
ನೋಡಪ್ಪಾ, ನನಗೆ ವಯಸ್ಸಾಗಿದ್ರೂ ನಾನು ಹಾಗೆ ಕಾಣಲ್ಲ. ನೀನು ಮಾಗಿ ಬಿಟ್ಟಿದ್ದೀಯಾ. ಅದಕ್ಕೆ ಹಂಗೆ ಹೇಳ್ದೆ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಆಗ ಅಕ್ಕ ಪಕ್ಕ ಇದ್ದ ಶಾಸಕರು ನಗೆಡಲಲ್ಲಿ ತೇಲಿದ್ದಾರೆ.