ಮುಂಬೈ: ಹಾಸ್ಯ ಪಾತ್ರಗಳ ಮೂಲಕ ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟ ಅತುಲ್ ಪರ್ಚುರೆ (Atul Parchure) ಅವರು ನಿಧನರಾಗಿದ್ದಾರೆ.
ಲಿವರ್ ಕ್ಯಾನ್ಸರ್‌ನಿಂದ ಕಳೆದ ಕೆಲ ವರ್ಷಗಳಿಂದ ಬಳಲುತ್ತಿದ್ದ ಅವರು, ಈಚೆಗೆ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ 57 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ತಾಯಿ, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಇದನ್ನೂ ಓದಿ: ದರ್ಶನ್ ಇಂದೇ ಹೈಕೋರ್ಟ್ ಮೊರೆ ಹೋಗ್ತಾರಾ? – ಅರ್ಜಿ ಸಲ್ಲಿಸಿದ್ರೆ ಮುಂದೇನು?
ಅತುಲ್ ಅವರು ಕಪಿಲ್ ಶರ್ಮಾ (Kapil Sharma) ಅವರ ಹಾಸ್ಯ ಕಾರ್ಯಕ್ರಮ, ಹಿಂದಿಯ ಹಲವಾರು ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಪ್ರಸಿದ್ಧ ನಟರಾಗಿದ್ದರು. ಟಾಕ್ ಶೋ ಪ್ರದರ್ಶನವೊಂದರಲ್ಲಿ, ಅವರು ತಾವು ಎದುರಿಸುತ್ತಿರುವ ಕ್ಯಾನ್ಸರ್ ರೋಗದ ಬಗ್ಗೆ ಹೇಳಿಕೊಂಡಿದ್ದರು. ಯಕೃತ್ತಿನಲ್ಲಿ 5 ಸೆಂ.ಮೀ ಗೆಡ್ಡೆ ಇದೆ ಎಂದು ಬಹಿರಂಗಪಡಿಸಿದ್ದರು. ಇದನ್ನೂ ಓದಿ: ಬಳ್ಳಾರಿ ಜೈಲಧಿಕಾರಿಗಳ ಕೈ ಸೇರಿದ ದರ್ಶನ್ ಮೆಡಿಕಲ್ ರಿಪೋರ್ಟ್
ಈ ಬಗ್ಗೆ ಅವರು ಮೊದಲೇ ತಿಳಿಸಿದ್ದು, ಆರಂಭದಲ್ಲಿ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಿದಾಗ ವೈದ್ಯರಿಂದ ಎಡವಟ್ಟಾಗಿ ಸಮಸ್ಯೆ ಎದುರಾಗಿತ್ತು. ನನ್ನ ಮೇದೋಜ್ಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರಿತು ಮತ್ತು ವಿವಿಧ ತೊಡಕುಗಳಿಗೆ ಕಾರಣವಾಯಿತು. ತಪ್ಪಾದ ಚಿಕಿತ್ಸೆಯು ವಾಸ್ತವವಾಗಿ ನನ್ನ ಸ್ಥಿತಿಯನ್ನು ಉಲ್ಬಣಗೊಳಿಸಿತು. ನಾನು ನಡೆಯಲು ಸಾಧ್ಯವಾಗಲಿಲ್ಲ ಮತ್ತು ಸ್ಪಷ್ಟವಾಗಿ ಮಾತನಾಡಲು ಕಷ್ಟಪಡುತ್ತಿದ್ದೆ. ಕೊನೆಗೆ ನಾನು ಬೇರೆ ವೈದ್ಯರನ್ನು ಸಂಪರ್ಕಿಸಿದೆ. ಸೂಕ್ತವಾದ ಔಷಧಿ ಮತ್ತು ಕೀಮೋಥೆರಪಿಯನ್ನು ಪಡೆದುಕೊಂಡೆ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಉಪ್ಪಿ ಅಣ್ಣನ ಮಗ ನಿರಂಜನ್‌ಗೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್
ಅತುಲ್ ಅವರು ಸಿನಿಮಾದ ಜೊತೆ ಜೊತೆ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದ್ದರು. ಶಾರುಖ್ ಖಾನ್, ಅಜಯ್ ದೇವಗನ್ ಮುಂತಾದ ಹಿಂದಿ ಚಿತ್ರರಂಗದ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಕಪಿಲ್ ಶರ್ಮಾ ನಡೆಸಿಕೊಟ್ಟ ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ಕಾರ್ಯಕ್ರಮದಲ್ಲಿ ಹಲವು ಪಾತ್ರಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ‘ನವ್ರಾ ಮಜಾ ನವಸಾಚಾ’, ‘ಸಲಾಮ್-ಇ-ಇಷ್ಕ್’, ‘ಆಲ್ ದಿ ಬೆಸ್ಟ್, ಫನ್ ಬಿಗಿನ್ಸ್’, ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ