ಕನ್ನಡ ಚಿತ್ರರಂಗದ ಮಹಾನ್ ಹಾಸ್ಯ ನಟ ನರಸಿಂಹರಾಜು (Narasimharaju) ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ನರಸಿಂಹರಾಜು ಅವರ ಮಗಳ ಮಗ ಅವಿನಾಶ್ ದಿವಾಕರ್ (Avinash Diwakar) ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡ್ತಿದ್ದಾರೆ. ಈ ಮೂಲಕ ಅಜ್ಜನಿಗೆ (Grand Father) ವಿಶೇಷ ಗಿಫ್ಟ್ ಕೂಡ ಕೊಡುತ್ತಿದ್ದಾರೆ.
ಹಾಸ್ಯ ಕಲಾವಿದ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ‘ಜುಗಾರಿ’ (Jugari Film) ಚಿತ್ರ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ ಅವಿನಾಶ್ ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ನರಸಿಂಹರಾಜು ಅವರು ಹುಟ್ಟಿ ಈ ವರ್ಷ 100 ವರ್ಷಗಳು ಆಗುತ್ತವೆ. 1932, ಜುಲೈ-24 ರಂದು 100ನೇ ಜನ್ಮ ದಿನ (Birthday) ಇದೆ. ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಲಿದ್ದಾರೆ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ
View this post on Instagram
ರಾಜಕುಮಾರ್ ಅವರ ಸಿನಿಮಾದಲ್ಲಿ ನರಸಿಂಹರಾಜು ಇರಲೇಬೇಕು ಎಂಬಷ್ಟರ ಮಟ್ಟಿಗೆ ಬೇಡಿಕೆ ಇದ್ದ ನಟ ನರಸಿಂಹರಾಜು, ಅವರ ಮೊಮ್ಮಗ ಅವಿನಾಶ್ ದಿವಾಕರ್, ಸಿನಿಮಾರಂಗಕ್ಕೆ ಬಂದು 10 ವರ್ಷಗಳು ಕಳೆದಿವೆ. ಕಲಾ ನಿರ್ದೇಶಕನಾಗಿ, ನಾಯಕ ನಟನಾಗಿ ಹೀಗೆ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿರೋ ಅವಿನಾಶ್, ಇದೀಗ ಡೈರೆಕ್ಟರ್ ಆಗಿದ್ದಾರೆ. ಅವಿನಾಶ್ ನಿರ್ದೇಶನದ ಚಿತ್ರಕ್ಕೆ ‘ರುದ್ರಾಂಕುಶ’ ಅಂತ ಹೆಸರಿಡಲಾಗಿದೆ. ಈ ಚಿತ್ರದ ಒಂದು ಝಲಕ್ ಈಗಾಗಲೇ ರಿವೀಲ್ ಮಾಡಲಾಗಿದೆ.
ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ‘ರುದ್ರಾಂಕುಶ’ ಚಿತ್ರದ ಟೀಸರ್ ಜುಲೈ-24 ರಂದು ರಿಲೀಸ್ ಆಗುತ್ತಿದೆ. ಈ ಮೂಲಕ ಅಜ್ಜನಿಗೆ ಅವಿನಾಶ್ ದಿವಾಕರ್ ಸ್ಪೆಷಲ್ ಗಿಫ್ಟ್ ಕೊಡ್ತಿದ್ದಾರೆ.