ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ಹಾಗೂ ಹಾಸ್ಯನಟ ಮುನಾವರ್ ಫಾರೂಕಿ ಅವರನ್ನು ನಿನ್ನೆ ತಡರಾತ್ರಿ ಮುಂಬೈ ಪೊಲೀಸರು ವಶಕ್ಕೆ ಪಡೆದ್ದಾರೆ. ಹುಕ್ಕಾ ಪಾರ್ಲರ್ (Hukkabar) ಮೇಲೆ ದಾಳಿ ಮಾಡಿದ್ದ ಮುನಾವರ್ ಫಾರೂಕಿ (Munawar Farooqui) ಮತ್ತು ಇತರರನ್ನು ರಾತ್ರಿಯೇ ಪೊಲೀಸರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಮುಂಬೈನ ಪ್ರತಿಷ್ಠಿತ ಹುಕ್ಕಾಬಾರ್ ನಲ್ಲಿ ಮುನಾವರ್ ಮತ್ತು ಸ್ನೇಹಿತರು ಪಾರ್ಟಿ ಮಾಡುತ್ತಿದ್ದರಂತೆ. ಈ ವೇಳೆಯಲ್ಲಿ ಹುಕ್ಕಾ ಬದಲು ತಂಬಾಕು ಸೇವನೆ ಮಾಡುತ್ತಿದ್ದರು ಎನ್ನುವ ಖಚಿತ ಮಾಹಿತಿಯ ಮೇರೆಗೆ ಮುಂಬೈ ಪೊಲೀಸರು ಹುಕ್ಕಾಬಾರ್ ಮೇಲೆ ದಾಳಿ ಮಾಡಿದ್ದರು ಎನ್ನಲಾಗುತ್ತಿದೆ.
ಒಂದಷ್ಟು ಹೊತ್ತು ಠಾಣೆಯಲ್ಲಿ ಇರಿಸಿಕೊಂಡು ಮುನಾವರ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಅವರನ್ನು ಬಿಟ್ಟು ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಯಾವುದೇ ಪ್ರತಿಕ್ರಿಯೆನ್ನು ಕೊಡಲು ಮುನಾವರ್ ನಿರಾಕರಿಸಿದ್ದಾರೆ.