ಬೆಂಗಳೂರು : ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಸೀಟುಗಳಿಗೆ ನಡೆಯುವ ಕಾಮೆಡ್-ಕೆ ಪರೀಕ್ಷೆ ಮೇ 10 ರಂದು ನಡೆಯಲಿದೆ. ದೇಶ್ಯಾದ್ಯಂತ 158 ನಗರಗಳ ಸುಮಾರು 400 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ದೇಶಾದ್ಯಂತ ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ 24 ಜಿಲ್ಲೆಗಳ 100 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ಸುಮಾರು 22 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಈ ಶೈಕ್ಷಣಿಕ ವರ್ಷ ಅಂದರೆ 2020-21 ನೇ ಸಾಲಿನಿಂದ ಕಾಮೆಡ್-ಕೆ ಶುಲ್ಕ 10% ಹೆಚ್ಚಳವಾಗಲಿದೆ. ಶುಲ್ಕ ಹೆಚ್ಚಳಕ್ಕೆ ಸರ್ಕಾರ ಕೂಡಾ ಒಪ್ಪಿಗೆ ಸೂಚಿಸಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕೊಂಚ ಸಮಸ್ಯೆ ಆಗಬಹುದು. 10% ಶುಲ್ಕ ಹೆಚ್ಚಳದೊಂದಿದೆ ಎಂಜಿನಿಯರಿಂಗ್ ಸೀಟಿಗೆ ಈ ಬಾರಿ ಖಾಸಗೀ ಕಾಲೇಜಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಸೀಟಿಗೆ 71,834 ರೂ ಶುಲ್ಕ ಆಗಲಿದೆ. ಅದರಂತೆ ಖಾಸಗಿ ಎಂಜಿನಿಯರಿಂಗ್ ಸೀಟಿಗೆ 1.58 ಲಕ್ಷ ಶುಲ್ಕ ಆಗಲಿದೆ.
Advertisement
ಇನ್ನು ಪರೀಕ್ಷೆ ಪಾರದರ್ಶಕವಾಗಿರಲು ಕಾಮೆಡ್-ಕೆ ಪರೀಕ್ಷೆಗಳು ಯೂನಿಗೇಜ್ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿದೆ. ಏಪ್ರಿಲ್ 17 ವರೆಗೂ ವಿದ್ಯಾರ್ಥಿಗಳು ನೋಂದಣಿಗೆ ಅವಕಾಶವಿದೆ. ನೋಂದಣಿ ಮಾಡಿಕೊಳ್ಳಲು ಈ ವೆಬ್ ಸೈಟ್ ಬಳಸಬಹುದಾಗಿದೆ.
Advertisement
www.comedk.org
www.unigauge.com