ಕಾರವಾರ: ಉತ್ತರ ಪ್ರದೇಶ (Uttarapradesh) ದ ರಾಮಮಂದಿರದ ಉದ್ಘಾಟನೆಯಲ್ಲಿ ಕರ್ನಾಟಕದವರೂ ಭಾಗಿಯಾಗಬೇಕು. ರಾಮಮಂದಿರದ ಉದ್ಘಾಟನೆಗೆ ನಿಮ್ಮನ್ನು ಆಹ್ವಾನಿಸಲು ಇಲ್ಲಿಗೆ ಬಂದಿದ್ದೇವೆ ಎಂದ ಯೋಗಿ ಆದಿತ್ಯನಾಥ್ (Yogi Adityanath) ರವರು ಕರ್ನಾಟಕದ ಜನತೆಗೆ ಆಹ್ವಾನ ನೀಡಿದರು.
Advertisement
ಇಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದ ಸೆಂಟ್ ಅಂಥೋನಿ ಮೈದಾನದಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇಂದು ಭಾರತ ಬಲಿಷ್ಠ ರಾಷ್ಟ್ರವಾಗಿದೆ. ಭಾರತದ ಅಭಿವೃದ್ಧಿ ಸಹಿಸದವರು ಮೋದಿಯವರ ವಿರೋಧ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪದೇ ಪದೇ ಸಾವರ್ಕರ್‌ಗೆ ಅಪಮಾನಿಸುತ್ತಿದೆ – ಅಮಿತ್ ಶಾ ಕಿಡಿ
Advertisement
Advertisement
ಕಾಂಗ್ರೆಸ್ (Congress) ಬಜರಂಗದಳ (Bajarangdal) ನಿಷೇಧ ಮಾಡಿ ಕರ್ನಾಟಕವನ್ನು ಐ.ಎಸ್.ಐ, ಫಿ.ಎಫ್.ಐ ಅಡ್ಡಾ ಮಾಡಲು ಕಾಂಗ್ರೆಸ್ ಹೊರಟಿದೆ. ಬಜರಂಗದಳ ನಿಷೇಧ ಮಾಡಿದರೆ ಪಿ.ಎಫ್. ಐ, ಐ.ಎಸ್.ಐ ಗೆ ಆಹ್ವಾನ ಮಾಡಿದಂತೆ. ಇದಕ್ಕೆ ಬಜರಂಗದಳ, ಬಿಜೆಪಿ ಬಿಡುವುದಿಲ್ಲ, ಯುಪಿಯಲ್ಲಿ ಗೂಂಡಾಗಳನ್ನು ನಾವು ಸೊಂಟ ಮುರಿದಂತೆ ಇಲ್ಲಿ ಬಿಜೆಪಿ ಸರ್ಕಾರ ಪಿ.ಎಫ್.ಐ, ಐ.ಎಸ್.ಐ ಸೊಂಟ ಮುರಿಯುತ್ತದೆ ಎಂದು ಹೇಳಿದರು.
Advertisement
ಅಂಜನಾದ್ರಿಯಲ್ಲಿ ಶ್ರೀ ಹನುಮಾನ್ ಮಂದಿರವನ್ನು ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೂ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಕಾಂಗ್ರೆಸ್ ಹನುಮಾನ್ ನನ್ನ ಏಕೆ ವಿರೋಧ ಮಾಡುತ್ತಿದೆ ಎಂದರೆ ಹನುಮಾನ್ ಇರುವಲ್ಲಿ ಭೂತಪ್ರೇತಗಳು ನಾಶವಾಗುತ್ತಿದೆ. ಹೀಗಾಗಿ ಭೂತ ಪ್ರೇತಗಳು ವಿರೋಧ ಮಾಡುತ್ತಿದೆ ಎಂದು ಟೀಕಿಸಿದರು.
ಯೋಗಿಗೆ ಯಕ್ಷಗಾನ ಕಿರೀಟ ಧರಿಸಿ ಸ್ವಾಗತ: ಹೊನ್ನಾವರಕ್ಕೆ ಆಗಮಿಸಿದ ಯೋಗಿಗೆ ಜಿಲ್ಲಾ ಬಿಜೆಪಿಯಿಂದ ಬಡಗುತಿಟ್ಟಿನ ಯಕ್ಷಗಾನ ಕಿರೀಟ ತೊಡಿಸಿ ಇಡಗುಂಜಿ ಮಹಾಗಣಪತಿಯ ವಿಗ್ರಹ ನೀಡಿ ಸ್ವಾಗತ ಮಾಡಲಾಯಿತಿ. ಈ ಸಂದರ್ಭದಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿನಕರ್ ಶೆಟ್ಟಿ, ಭಟ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ನಾಯ್ಕ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್, ಜಿಲ್ಲಾ ಪ್ರಭಾರಿ ಪ್ರಸನ್ನ ಕೆರೆಕೈ ಉಪಸ್ಥಿತರಿದ್ದರು.