ಬಾಗಲಕೋಟೆ/ವಿಜಯಪುರ: ದೀಪಾವಳಿಯಲ್ಲಿ ದೀಪಗಳ ಸುತ್ತ ರಂಗೋಲಿಯ ಚಿತ್ರ ಬಿಡಿಸಿ ಮಧ್ಯ ದೀಪಗಳು ಮನಿಗುತ್ತಿದ್ದರೆ ನೋಡೋರ ಮನಸ್ಸಿಗೆ ಖುಷಿ ನೀಡುತ್ತೆ ಅಲ್ವೇ? ಬಾಗಲಕೋಟೆಯಲ್ಲಿ ಮಹಿಳೆಯೊಬ್ಬರು ದೀಪಾವಳಿ ಹಬ್ಬಕ್ಕಾಗಿ ಮನೆಯನ್ನೇ ಕಲರ್‍ಫುಲ್ 3ಡಿ ರಂಗೋಲಿಗಳಿಂದ ಅಲಂಕರಿಸಿದ್ದಾರೆ.
ಬಾಗಲಕೋಟೆಯ ವಿದ್ಯಾಗಿರಿ ನಿವಾಸಿಯಗಿರುವ ಅನುಷಾ ಕೋರಾ ಕಲರ್‍ಫುಲ್ ರಂಗೋಲಿಗಳಿಂದಲೇ ಮನೆಯನ್ನ ಅಲಂಕರಿಸಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಇವರು ರಂಗೋಲಿ ಕಲೆ ಬಗ್ಗೆ ತಿಳಿದುಕೊಂಡು ಮ್ಯಾಜಿಕ್, ಕ್ಯಾಲಿಗ್ರಾಫ್, ವಾಟರ್, ಸ್ಯಾಂಡ್ ರಂಗೋಲಿ ಹೀಗೆ ಸುಮಾರು 30ಕ್ಕೂ ಹೆಚ್ಚು ಬಗೆಯ ವಿಭಿನ್ನ ರಂಗೋಲಿ ಹಾಕುವ ಮೂಲಕ ಹೆಸರಾಗಿದ್ದಾರೆ. ಪ್ರತೀ ವರ್ಷವೂ ಎರಡು ಬಗೆಯ ವಿಭಿನ್ನ ರಂಗೋಲಿಯನ್ನ ಕಂಡು ಹಿಡಿಯುತ್ತಾರೆ. ಅಷ್ಟೇ ಅಲ್ಲದೆ ರಂಗೋಲಿ ಬಗ್ಗೆ ಎರಡು ಪುಸ್ತಕಗಳನ್ನ ಸಹ ಬರೆದಿದಿದ್ದಾರೆ. ಈ ಬಾರಿ ಅಬ್‍ಸ್ಟ್ರಾಕ್ಟ್ ಮತ್ತು 3ಡಿ ರಂಗೋಲಿಗಳನ್ನ ಹಾಕಿ ಮನೆಯನ್ನ ಅಲಂಕರಿಸಿದ್ದಾರೆ.
Advertisement
Advertisement
ಇನ್ನು ಅನುಷಾ ಅವರ ಈ ವಿಭಿನ್ನ ರಂಗೊಲಿ ಕಲೆಗೆ ಎಲ್ಲರೂ ಬೆರಗಾಗ್ತಾರೆ. ಅಷ್ಟೇ ಅಲ್ಲದೇ ರಂಗೋಲಿ ಆಸಕ್ತರಿಗೆ ಉಚಿತವಾಗಿಯೇ ರಂಗೋಲಿ ಕಲೆಯ ಬಗ್ಗೆ ಹೇಳಿಕೊಡ್ತಾರೆ. 10 ವರ್ಷಗಳಿಂದ ಪ್ರತೀ ವರ್ಷವೂ ದೀಪಾವಳಿ ಹಬ್ಬದಂದು ದೀಪ ಹಾಗೂ ರಂಗೋಲಿಯ ಮೂಲಕ ಮನೆಯನ್ನ ಅಲಂಕರಿಸುತ್ತಿದ್ದಾರೆ. ಯಾವುದೇ ತರಬೇತಿ ಇಲ್ಲದೇ ಅನುಷಾ ಅವರು ವಿಭಿನ್ನ ರಂಗೋಲಿ ಕಲೆ ಕರಗತ ಮಾಡಿಕೊಂಡು ಎಲ್ಲರಿಗೂ ತಿಳಿಸಿಕೊಡ್ತಿರೋದು ನಮೆಗೆಲ್ಲ ಖುಷಿ ಅನಿಸುತ್ತೆ ಅಂತಾರೆ ರಂಗೋಲಿ ಆಸಕ್ತರು.
Advertisement
ದೀಪಗಳ ಜೊತೆ ಬಗೆ ಬಗೆಯ ರಂಗೋಲಿ ಹಾಕೋದ್ರಿಂದ ಮನೆ ಸುಂದರವಾಗಿ ಕಾಣುತ್ತೆ. ಹಬ್ಬವನ್ನ ವಿಶೇಷವಾಗಿ ಆಚರಿಸಬಹುದು ಅನ್ನೋದು ಅನುಷಾ ಅವರ ಮಾತು. ಇಷ್ಟೆಲ್ಲ ಕಲೆ ಬಲ್ಲ ಅನುಷಾರ ರಂಗೋಲಿ ಕಲೆಗೆ ಸುತ್ತಮುತ್ತಲ ಜನರು ಫಿದಾ ಆಗಿದ್ದಾರೆ.
Advertisement
ವಿಜಯಪುರದಲ್ಲಿ ದೀಪಾವಳಿ ಸಂಭ್ರಮ: ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಇಂದಿನಿಂದ ಪ್ರಾರಂಭವಾಗಿದೆ. ನರಕ ಚತುರ್ದಶಿಯಾದ ಇಂದು ಬೆಳಿಗ್ಗೆ ಎದ್ದು ಎಣ್ಣೆ ಸ್ನಾನ ಮಾಡೋದು ಸರ್ವೆ ಸಾಮಾನ್ಯ. ಆದ್ರೆ ವಿಜಯಪುರದಲ್ಲಿ ಮಾತ್ರ ಸ್ನಾನಕಿಂತಲು ಮುಂಚೆ ಆರತಿ ಮಾಡಿಸಿಕೊಂಡು ತದನಂತರ ಸ್ನಾನ ಮಾಡುವುದು ವಾಡಿಕೆ. ಪಾಂಡವರು ಇಂದು ನರಕಾಸುರನ ವಧೆ ಮಾಡಿ ಸೂರ್ಯೋದಯದ ಮುಂಚೆ ಬಂದಿರುತ್ತಾರಂತೆ. ಆಗ ವಿಜಯಶಾಲಿಯಾಗಿ ಬಂದ ಪಾಂಡವರನ್ನು ಆರತಿ ಮಾಡಿ ವಿಜೃಂಭಣೆಯಿಂದ ಮನೆಯೊಳಗೆ ಕರತರಲಾಗುತ್ತಂತೆ. ಆ ಕಾರಣಕ್ಕಾಗಿಯೇ ವಿಜಯಪುರದಲ್ಲಿ ಸ್ನಾನಕಿಂತಲು ಮುಂಚೆ ಆರತಿ ಮಾಡಿಸಿಕೊಳ್ಳುವ ವಾಡಿಕೆ ಇದೆ. ಒಟ್ಟಿನಲ್ಲಿ ದೀಪಗಳ ಹಬ್ಬ ದೀಪಾವಳಿ ಈ ಬಾರಿ ಐತಿಹಾಸಿಕ ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.