ಉಡುಪಿ: ಕನ್ನಡ ಚಿತ್ರರಂಗದ (Kannada Cinema) ಹಿರಿ ತಲೆ ಶ್ರೇಷ್ಠ ಕಲಾವಿದೆ ಲೀಲಾವತಿ (Leelavati) ಅಗಲಿದ್ದಾರೆ. ಬಣ್ಣದ ಲೋಕವೇ ಹಾಗೆ. ನಮ್ಮ ಜೀವನವೇ ಹಾಗೆ. ಲೀಲಾವತಿ ಕೊನೆಯ ದಿನದವರೆಗೂ ಕಷ್ಟದ ಜೀವನ ಸಾಗಿಸಿದರು. ದುಃಖದಲ್ಲಿ ಎಲ್ಲಾ ಅಪಮಾನಗಳನ್ನು ಸಹಿಸಿಕೊಂಡು ಜೀವಿಸಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೀಲಾವತಿ ದುಃಖವನ್ನು ನುಂಗಿ ಬದುಕಿದ ಕಲಾವಿದೆ. ಸಮಾಜಕ್ಕೆ ಏನಾದರೂ ಮಾಡಬೇಕೆಂದು ಬೆಂಗಳೂರಿನಿಂದ ದೂರ ಹೋಗಿ ನೆಲಮಂಗಲದಲ್ಲಿ (Nelamangala) ನೆಲೆಸಿದರು. ಸಮಾಜ ಸೇವೆಯ ಮೂಲಕ ಕೊನೆಯ ದಿನಗಳನ್ನು ಖುಷಿಯಾಗಿ ಕಳೆದರು. ಬಣ್ಣದ ಬದುಕು ಕಷ್ಟ. ಲೀಲಾವತಿಯವರ ಬದುಕು ಇನ್ನೂ ಕಷ್ಟ ಎಂದರು. ಇದನ್ನೂ ಓದಿ: ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಲೀಲಾವತಿ: ಬ್ರಹ್ಮಾಂಡ ಗುರೂಜಿ
Advertisement
Advertisement
ಲೀಲಾವತಿ ನಮ್ಮೂರಿನವರು. ನನಗೆ ಸಿಕ್ಕಾಗೆಲ್ಲ ತುಳುವಿನಲ್ಲೇ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ (Bengaluru) ನೆಲೆಸಿ ಚಲನಚಿತ್ರರಂಗಕ್ಕೆ ಅಪಾರ ಸೇವೆ ನೀಡಿದ್ದಾರೆ. ಸಮಾಜ ಸೇವೆ, ಪ್ರಾಣಿಗಳ ಸೇವೆಯ ಮೂಲಕ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ವಿನೋದ್ ರಾಜ್, ಕುಟುಂಬ ಬಂಧು ಬಳಗಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಲೀಲಾವತಿ ಅಂತಿಮ ದರ್ಶನ ಪಡೆದ ಸ್ಯಾಂಡಲ್‌ವುಡ್ ನಟ, ನಟಿಯರು
Advertisement