ಬೆಂಗಳೂರು: ಹುಳಿಮಾವು ಪೊಲೀಸರು ಗಾಂಜಾ ಸೀಜ್ ಪ್ರಕರಣದ ಆರೋಪದ ಮೇಲೆ ಲವ್ ಬರ್ಡ್ಸ್ ಗಳನ್ನು ಬಂಧಿಸಿದ್ದು, ಅವರ ರೋಚಕ ಸ್ಟೋರಿ ತನಿಖೆ ವೇಳೆ ಬಯಲಾಗಿದೆ.
ಬೆಂಗಳೂರಿನ ಹುಳಿಮಾವು ಪೊಲೀಸರು ಆರೋಪಿ ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯಾರನ್ನು ಬಂಧಿಸಿದ್ದರು. ಈ ಪ್ರೇಮಿಗಳಿಂದ ಪೊಲೀಸರು 8 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಆಯಿಲ್, ಗಾಂಜಾ ಸೀಜ್ ಮಾಡಿದ್ದರು. ದಾಳಿ ವೇಳೆ ಪ್ರೇಮಿಗಳ ಮನೆಯಲ್ಲಿದ್ದ 12 ಲೀಟರ್ 940 ಗ್ರಾಂ ಹ್ಯಾಶಿಶ್ ಆಯಿಲ್, 26 ಕೆಜಿ 250 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಬಂಧಿತ ಲವ್ ಬರ್ಡ್ಸ್ ತಮ್ಮ ರೋಚಕ ಕಥೆಯನ್ನು ಬಾಯಿಬಿಟ್ಟಿದ್ದಾರೆ.
Advertisement
Advertisement
ಸಿಗಿಲ್ ಮತ್ತು ವಿಷ್ಣುಪ್ರಿಯಾ ಕೇರಳ ಮೂಲದವರಾಗಿದ್ದರು. ವಿಷ್ಣುಪ್ರಿಯಾ ಕುಟುಂಬಸ್ಥರು ಕೇರಳದಿಂದ ಕೊಯಮತ್ತೂರುಗೆ ಶಿಫ್ಟ್ ಆಗಿದ್ರು. ವಿಷ್ಣುಪ್ರಿಯಾ ತಾಯಿ ಬಾಲ್ಯದಲ್ಲಿದ್ದಾಗಲೇ ಸಾವನ್ನಪ್ಪಿದ್ದು, ತಂದೆ ಜೊತೆಗೆ ವಾಸವಾಗಿದ್ದಳು. ನಂತರ ಕೊಯಮುತ್ತೂರಲ್ಲೇ ವಿದ್ಯಾಭ್ಯಾಸ ನಡೆಸುತ್ತಿದ್ದಳು. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ
Advertisement
ಪಿಯುಸಿವರೆಗೂ ಕೇರಳದಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಸಿಗಿಲ್, ನಂತರ ಬಿಬಿಎ ಗೆ ಕೊಯಮುತ್ತೂರು ಕಡೆ ಮುಖ ಮಾಡಿದ್ದನು. ಈ ವೇಳೆ ವಿಷ್ಣುಪ್ರಿಯಾ ಭೇಟಿಯಾಗಿದ್ದು, ಮೂಲತಃ ಇಬ್ಬರು ಕೇರಳದವರಾಗಿದ್ದರಿಂದ ಇವರ ಮಧ್ಯೆ ಹೆಚ್ಚು ಆತ್ಮೀಯತೆ ಬೆಳೆದಿದೆ. ಆತ್ಮೀಯತೆ ಇಬ್ಬರ ಮಧ್ಯೆ ಪ್ರೀತಿಯಾಗಿ ಬದಲಾಗಿದೆ.
Advertisement
ಇಬ್ಬರು ಕಾಲೇಜು ದಿನಗಳಿಂದಲೇ ಡ್ರಗ್ಸ್ ದಾಸರಾಗಿದ್ದರು. ಹೆಚ್ಚು ಹಣ ಕೊಟ್ಟು ಗಾಂಜಾ, ಮಾದಕ ವಸ್ತು ಖರೀದಿಸ್ತಿದ್ರು. ಆಗಲೇ ಇಬ್ಬರು ಡ್ರಗ್ಸ್ ಪೆಡ್ಲಿಂಗ್‍ಗೆ ಪ್ಲಾನ್ ಸಹ ಮಾಡಿಕೊಂಡಿದ್ರು. ಕೊಯಮತ್ತೂರಿಗಿಂತ ಬೆಂಗಳೂರಲ್ಲಿ ಡ್ರಗ್ಸ್‍ಗೆ ಹೆಚ್ಚು ಬೇಡಿಕೆ ಇರೋದನ್ನು ಇಬ್ಬರು ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆ ಮೂರು ತಿಂಗಳ ಹಿಂದೆ ಕೊತ್ತನೂರಿಗೆ ಶಿಫ್ಟ್ ಆಗಿದ್ರು. ಸಿಗಿಲ್ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕಾಲೇಜಿನಲ್ಲಿ ಸೀಟ್ ಕೊಡಿಸ್ತಿದ್ದ. ವಿಷ್ಣುಪ್ರಿಯಾ ಟ್ಯಾಟು ಆರ್ಟಿಸ್ಟ್ ಆಗಿದ್ದಳು. ಸಿಗಿಲ್ ಕಾಲೇಜಿಗೆ ಸೇರಿಸುವ ವಿದ್ಯಾರ್ಥಿಗಳಿಗೆ ಡ್ರಗ್ಸ್ ನಶೆ ಹತ್ತಿಸ್ತಿದ್ದನು. ಅವರ ಮೂಲಕ ವಿದ್ಯಾರ್ಥಿ ಸಮುದಾಯವನ್ನೇ ಟಾರ್ಗೆಟ್ ಮಾಡ್ತಿದ್ದ.
ಇಬ್ಬರು ವಿಶಾಖಪಟ್ಟಣಕ್ಕೆ ತೆರಳಿ ಬಸ್ ನಲ್ಲಿ ಹ್ಯಾಶಿಶ್ ಆಯಿಲ್ ತರುತ್ತಿದ್ದರು. ಬಸ್‍ನಲ್ಲಿ ಬಂದರೆ ಪೊಲೀಸರು ಪರಿಶೀಲನೆ ಮಾಡಲ್ಲ ಅನ್ನೋ ಯೋಜನೆಯಿಂದ ಈ ರೀತಿ ಮಾಡುತ್ತಿದ್ದರು. ತಾವು ಐಷಾರಾಮಿ ಜೀವನ ನಡೆಸುವುದಕ್ಕೆ ಬೇರೆ ವಿದ್ಯಾರ್ಥಿಗಳನ್ನು ಬಲಿಕೊಡುತ್ತಿದ್ದರು. ಇದನ್ನೂ ಓದಿ: ದಕ್ಷಿಣ ಕಾಶಿ ಶ್ರೀಕ್ಷೇತ್ರ ಶಿವಗಂಗೆಯಲ್ಲಿ ಗಾಂಜಾ ಮಾರಾಟ – ಆರೋಪಿ ಬಂಧನ
ಈ ಲವರ್ಸ್ ಮನೆಯಲ್ಲಿಯೇ ಡ್ರಗ್ಸ್ ಮತ್ತಲ್ಲಿ ಪ್ರತಿ ದಿನ ತೇಲಾಡ್ತಿದ್ದರು. ಮತ್ತಷ್ಟು ಕಿಕ್ ಏರಿಸಿಕೊಳ್ಳಲು ಮಾಡ್ಕೊಂಡಿದ್ರು ಖತರ್ನಾಕ್ ಪ್ಲಾನ್ ಮಾಡಿಕೊಂಡಿದ್ದು, ಮನೆಯಲ್ಲಿ ಕಲರ್ ಕಲರ್ ಲೈಟ್ ಹಾಕಿಕೊಂಡಿದ್ರು. ಮೊದಲು ಗಾಂಜಾ, ಹ್ಯಾಶಿಶ್ ಆಯಿಲ್ ತೆಗೆದುಕೊಳ್ತಿದ್ರು, ನಂತರ ಲೈಟ್ ಆಫ್ ಮಾಡಿ ಕಲರ್ ಲೈಟ್ ಆನ್ ಮಾಡ್ತಿದ್ರು. ಆಗ ಡ್ರಗ್ಸ್ ನಶೆಯಲ್ಲಿ ಕಲರ್ ಲೈಟ್ ನೋಡಿದ್ರೆ ಮತ್ತಷ್ಟು ಕಿಕ್ ಕೊಡುತ್ತಿತ್ತು ಎಂದು ತನಿಖೆ ವೇಳೆ ಹೇಳಿಕೊಂಡಿದ್ದಾರೆ.