ಇಂಫಾಲ: ಉಗ್ರರು ಹೊಂಚುಹಾಕಿ ನಡೆಸಿದ ದಾಳಿಯಲ್ಲಿ ಮೂವರು ಯೋಧರು ಸಹಿತ ಅಸ್ಸಾಂ 46 ಕಮಾಂಡಿಂಗ್ ಅಧಿಕಾರಿ, ಅವರ ಮಗ, ಪತ್ನಿ ಸೇರಿ ಏಳು ಮಂದಿ ಮೃತಪಟ್ಟಿರುವ ಘಟನೆ ಮಣಿಪುರದ ಸಿಂಘಾತ್‍ನಲ್ಲಿ ನಡೆದಿದೆ.
Advertisement
ಮಣಿಪುರ ಮೂಲದ ಉಗ್ರರ ಗುಂಪು ಪೀಪಲ್ಸ್ ಲಿಬರೇಶನ್ ಆರ್ಮಿ ಈ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಇದ್ದು, ಉಗ್ರರ ಗುಂಪು ಏಕಾಏಕಿ ಯೋಧರ ಮೇಲೆ ದಾಳಿ ಆರಂಭಿಸಿದೆ ದಾಳಿಯಲ್ಲಿ 7 ಜನ ಮೃತಪಟ್ಟಿದ್ದು, 3 ಮಂದಿ ಯೋಧರು ತೀವ್ರ ಗಾಯಗೊಂಡು ಸ್ಥಳೀಯ ಬೆಹಿರಂಗ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯವರ 4 ಗಂಟೆ ಭೇಟಿಗೆ 23 ಕೋಟಿ ಖರ್ಚು- ಮಧ್ಯಪ್ರದೇಶ ಸರ್ಕಾರ
Advertisement
Strongly condemn the cowardly attack on a convoy of 46 AR which has reportedly killed few personnel including the CO & his family at CCpur today. The State forces & Para military are already on their job to track down the militants. The perpetrators will be brought to justice.
— N.Biren Singh (@NBirenSingh) November 13, 2021
Advertisement
ದಾಳಿಯ ಬಗ್ಗೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, 46 ಅಸ್ಸಾಂ ರೈಫಲ್ಸ್ ಮೇಲೆ ಉಗ್ರರು ಹೇಡಿತನದಿಂದ ಹೊಂಚುಹಾಕಿ ದಾಳಿ ಮಾಡಿದ್ದು ಖಂಡನೀಯ. ಸಿಸಿಪುರದಲ್ಲಿ ನಡೆದ ಈ ದಾಳಿಯಲ್ಲಿ ಕಮಾಂಡಿಂಗ್ ಅಧಿಕಾರಿ ಮತ್ತು ಅವರ ಕುಟುಂಬ ಹತ್ಯೆಗೀಡಾಗಿದೆ. ಯೋಧರು ಹುತಾತ್ಮರಾಗಿದ್ದು, ಉಗ್ರರನ್ನು ಸೆರೆಹಿಡಿಯಲು ರಾಜ್ಯದ ಭಧ್ರತಾ ಪಡೆಗಳು ಮತ್ತು ಪ್ಯಾರಾಮಿಲಿಟರಿ ಸಿಬ್ಬಂದಿ ಕಾರ್ಯಚರಣೆ ಆರಂಭಿಸಿದ್ದಾರೆ. ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಬೇರೆ ಗುಂಪಿನ ರಕ್ತ ಹಾಕಿದ ವೈದ್ಯರು – ಯುವತಿ ಸಾವು
Advertisement