Connect with us

Crime

ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಚಾಲಕ ಸಾವು

Published

on

ಕಾರವಾರ: ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಸಮೀಪದಲ್ಲಿ ನಡೆದಿದೆ.

ಪ್ಲೈವುಡ್ ತುಂಬಿದ್ದ ಲಾರಿ ಚಾಲಕ ರಾಜೇಂದ್ರ ಬಾಪು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕ್ಲೀನರ್ ನಿತೀನ್‍ಗೆ ಗಂಭೀರ ಗಾಯಗೊಂಡಿದ್ದಾನೆ.

ಪ್ಲೈವುಡ್ ತುಂಬಿದ್ದ ಲಾರಿಯು ಕೇರಳದಿಂದ ಗೋವಾ ಕಡೆ ಹೊರಟಿತ್ತು. ಮಂಕಿ ಗ್ರಾಮದ ಸಮೀಪದಲ್ಲಿ ಮಂಗಳೂರಿಗೆ ಹೊರಟಿದ್ದ ಲಾರಿ ಹಾಗೂ ಪ್ಲೈವುಡ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಪ್ಲೈವುಡ್ ತುಂಬಿದ್ದ ಪಲ್ಟಿಯಾಗಿ ಚಾಲಕ ರಾಂಜೇಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

www.publictv.in