– ಸಾರ್ವಜನಿಕರಿಂದ ಮೆಚ್ಚುಗೆ
ಮಡಿಕೇರಿ: ರಸ್ತೆ ಬದಿಯಲ್ಲಿ ಬಿದ್ದಿದ್ದ 15 ಸಾವಿರ ನಗದು ಹಣ, ಪ್ರಮುಖ ದಾಖಲಾತಿಗಳಿದ್ದ ಪರ್ಸ್ ಅನ್ನು ಮೂವರು ವಿದ್ಯಾರ್ಥಿಗಳು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಹಾಗೂ ಮಾನವೀಯತೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
Advertisement
ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದ ಪ್ರಿ-ಯುನಿವರ್ಸಿಟಿ ಕಾಲೇಜಿನ ಕೆ.ಕೆ.ರಕ್ಷತ್, ವಿಕಾಸ್ ಮತ್ತು ವಿಶ್ವಾಸ್ ಎನ್ನುವ ಯುವಕರೇ ಪರ್ಸ್ ಮರಳಿಸಿರುವ ಮಾನವೀಯ ಅಂತಃಕರಣದ ವಿದ್ಯಾರ್ಥಿಗಳಾಗಿದ್ದಾರೆ. ನಿನ್ನೆ ದಿನ ಕಾಲೇಜು ಮುಂಭಾಗದ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಪರ್ಸ್ ಈ ಯುವಕರ ಕಣ್ಣಿಗೆ ಬಿದ್ದಿದೆ. 15 ಸಾವಿರ ನಗದು ಹಣ ಮತ್ತು ಪ್ರಮುಖ ದಾಖಲೆಗಳು ಅದರೊಳಗಿದ್ದವು. ಜೊತೆಗೆ ಮೊಬೈಲ್ ಸಂಖ್ಯೆಯಿತ್ತು. ಕೂಡಲೇ ಆ ಸಂಖ್ಯೆಗೆ ಕರೆ ಮಾಡಿ ಪರ್ಸ್ ಬಿದ್ದು, ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಅದನ್ನು ವಾರಿಸುದಾರರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಮುಕ್ತ ಅವಕಾಶ
Advertisement
Advertisement
ಈ ಯುವಕರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ನೆಲ್ಲಿಹುದಿಕೇರಿಯ ಜನಾರ್ದನ ಎಂಬವರು ನಿನ್ನೆ ದಿನ ಕೆಲಸಕ್ಕೆಂದು ಬೈಕ್ ನಲ್ಲಿ ಭಾಗಮಂಡಲದತ್ತ ಹೋಗುತ್ತಿದ್ದಾಗ, ಮಾರ್ಗಮಧ್ಯದ ಮೂರ್ನಾಡು ಪ್ರಿ-ಯುನಿವರ್ಸಿಟಿ ಕಾಲೇಜು ಬಳಿ ಪರ್ಸ್ ಬಿದ್ದು ಹೋಗಿತ್ತು. ಇದನ್ನು ಪ್ರಾಮಾಣಿಕವಾಗಿ ರಕ್ಷತ್, ವಿಕಾಸ್ ಹಾಗೂ ವಿಶ್ವಾಸ್ ವಿದ್ಯಾರ್ಥಿಗಳು ಮರಳಿಸಿ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.